ಮಂಗಳೂರು: ಕೋವಿಡ್-19 ಬಗ್ಗೆ ಬ್ಲಡ್ ಡೋನರ್ಸ್ ನಿಂದ ಜಾಗೃತಿ

Update: 2020-03-24 13:05 GMT

ಮಂಗಳೂರು, ಮಾ.24: ಇಂಡಿಯನ್ ರೆಡ್ ಕ್ರಾಸ್ ಮಂಗಳೂರು ಜೊತೆ ಕೈ ಜೋಡಿಸಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಜಿಲ್ಲೆಯ ಮಂಗಳೂರು ನಗರ ಹಾಗೂ ಹೊರ ವಲಯಗಳಲ್ಲಿ ಕೊರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಿತು. ಜೊತೆಗೆ, ಜಾಗರೂಕತೆಯಿಂದ ಮನೆಯಲ್ಲಿಯೇ ಇರಬೇಕು ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಲು ಸಾರ್ವಜನಿಕರಲ್ಲಿ ವಿನಂತಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ .

ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಉಪಾಧ್ಯಕ್ಷ ಮುನೀರ್ ಚೆಂಬುಗುಡ್ಡೆ ಸಹಿತ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಜೊತೆಗಿದ್ದರು.

'ದಿನದ 24 ಘಂಟೆಗಳಲ್ಲೂ ತುರ್ತು ರಕ್ತದ ಅವಶ್ಯಕತೆಯಿದ್ದರೆ ಈ ಲಾಕ್ ಡೌನ್ ವೇಳೆಯೂ ನಮ್ಮ ಸಂಸ್ಥೆಯ ಕಾರ್ಯನಿರ್ವಹಣಾ ತಂಡ ಸಕಲ ಸಿದ್ಧತೆಯಲ್ಲಿದೆ. ರಕ್ತದ ಕೊರತೆಯನ್ನು ನೀಗಿಸಲು ಶತಾಯಗತಾಯ ಪ್ರಯತ್ನ ಪಡುತ್ತೇವೆ ಎಂದು ಬ್ಲಡ್ ಡೋನರ್ಸ್ ಮಂಗಳೂರು(ರಿ) ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News