ಕಾಸರಗೋಡು : ಇಂದು ಆರು ಕೊರೋನ ವೈರಸ್ ಪ್ರಕರಣಗಳು ದೃಢ

Update: 2020-03-24 13:27 GMT

ಕಾಸರಗೋಡು :  ಜಿಲ್ಲೆಯಲ್ಲಿ ಇಂದೂ ಕೂಡಾ ಆರು ಕೊರೋನ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 44ಕ್ಕೇರಿದೆ. ಇಂದು ಬಂದ 16 ಪಾಸಿಟಿವ್ ಪ್ರಕರಣಗಳಲ್ಲಿ ಆರು ಕಾಸರಗೋಡಿಗೆ ಸೇರಿವೆ.

ಕಾಸರಗೋಡು ಜಿಲ್ಲೆಯಲ್ಲಿ 2736 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 85 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. ಇಂದು 99 ಮಂದಿಯ ಸ್ಯಾಂಪಲ್ ಗಳನ್ನು  ತಪಾಸಣೆಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News