ಕ್ಯಾಂಪ್ಕೋ ಸಂಸ್ಥೆಯಿಂದ ರಜೆ ಘೋಷಣೆ

Update: 2020-03-24 15:29 GMT

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಚಾಕಲೇಟು ಸಂಸ್ಥೆಯು ಮಾ. 24ರಿಂದ 31ರ ತನಕ ಸಂಸ್ಥೆಗೆ ರಜೆ ಘೋಷಿಸಿದೆ. ರಜೆ ಘೋಷಿಸಿ ಸಂಸ್ಥೆಯ ಮುಖ್ಯಧ್ವಾರದ ಬಳಿಯಲ್ಲಿ ನೋಟೀಸು ಹಚ್ಚಲಾಗಿದೆ.

ಪುತ್ತೂರು ತಾಲೂಕಿನಲ್ಲಿ ಬಹುತೇಕ ಎಲ್ಲಾ ಉದ್ಯಮಗಳು ಅಂಗಡಿ ಮುಂಗಟ್ಟುಗಳು ಬಂದ್ ಆಚರಣೆ ಮಾಡಿದ್ದರೂ ಕ್ಯಾಂಪ್ಕೋ ಸಂಸ್ಥೆ ಮಾತ್ರ ಕಾರ್ಮಿಕರಿಗೆ ರಜೆ ನೀಡದೆ ಕೆಲಸ ನಿರ್ವಹಣೆ ಮಾಡಿಸುತ್ತಿದೆ. ಕ್ಯಾಂಪ್ಕೋ ಚಾಕಲೇಟು ಸಂಸ್ಥೆಯಲ್ಲಿ ನಿಮಯ ಉಲ್ಲಂಘನೆ ಮಾಡಿ 100 ಕ್ಕೂ ಹೆಚ್ಚು ಕಾರ್ಮಿಕರನ್ನು ದುಡಿಸಲಾಗುತ್ತಿದೆ ಎಂದು ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿತ್ತು.

ಬುಧವಾರ ಪುತ್ತೂರು ಉಪವಿಭಾಗದ ಡಿವೈಎಸ್‍ಪಿ ದಿನಕರ ಶೆಟ್ಟಿ ಅವರು ದೂರವಾಣಿ ಮೂಲಕ ಎಚ್ಚರಿಕೆ ನೀಡಿದ್ದು, ತಕ್ಷಣವೇ ಕ್ಯಾಂಪ್ಕೋ ಸಂಸ್ಥೆ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಹೊರ ಕಳುಹಿಸಿ ರಜೆ ಘೋಷಣೆ ಮಾಡಿರುವುದಾಗಿ ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News