ಕೋವಿಡ್ -19: ತುರ್ತು ಸೇವೆಗೆ ಎಸ್ಸೆಸ್ಸೆಫ್ ಸಜ್ಜು

Update: 2020-03-24 16:26 GMT

ಮಂಗಳೂರು :  ಕೋವಿಡ್-19  ವಿರುದ್ಧ ದೇಶಾದ್ಯಂತ ಆರೋಗ್ಯ ಕಾರ್ಯಕರ್ತರು ಸಹಿತ ಸಾವಿರಾರು ಸರಕಾರಿ ನೌಕರರು ಕಾರ್ಯನಿರತರಾಗಿದ್ದಾರೆ. ರಾಜ್ಯದಲ್ಲಿಯೂ ಕಾರ್ಯನಿರತರಾಗಿರುವ ಆರೋಗ್ಯ ಇಲಾಖೆ ಹಾಗೂ ಸರಕಾರಿ ನೌಕರರೊಂದಿಗೆ ಕೈ ಜೋಡಿಸಲು ಎಸ್ಸೆಸ್ಸೆಫ್ ರಾಜ್ಯ ಸಮಿತಿ ನಿರ್ಧರಿಸಿದೆ.

ಇಂದು  ಆನ್ಲೈನ್ ಸಭೆ ನಡೆಸಿದ ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ಕೆಲವು ಮಹತ್ವದ ನಿರ್ಧಾರ ಕೈಗೊಂಡಿದೆ‌. ತುರ್ತು ಸಂದರ್ಭದಲ್ಲಿ ಸೂಕ್ತ ವಾಹನಗಳ ಮೂಲಕ ಆಸ್ಪತ್ರೆಗೆ ಸಾಗಿಸಲು,  ಲಾಕ್‌ಡೌನ್‌ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಬಡ-ನಿರ್ಗತಿಕರಿಗೆ ಅನ್ನಾಹಾರ ಪೂರೈಸಲು, ಎಸ್ಸೆಸ್ಸೆಫ್ ಅಧೀನದ 'Qteam' ಕಾರ್ಯಕರ್ತರು ಲಭ್ಯರಿರುತ್ತಾರೆ.

ತಜ್ಞ ವೈದ್ಯರ ವಿಡಿಯೋ ಕಾನ್ಫರೆನ್ಸ್  ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ತಾಂತ್ರಿಕ ತಂಡ ರಚಿಸಲಾಗಿದೆ‌. ತುರ್ತು ರಕ್ತದಾನಕ್ಕೆ ಜಿಲ್ಲಾ ಸಮಿತಿಗಳಿಗೆ ಸೂಚಿಸಲಾಗಿದೆ. ಸೆಕ್ಟರ್ ಮಟ್ಟದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸುವ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಲಾಗಿದೆ.

ತುರ್ತು ಅಗತ್ಯಕ್ಕಾಗಿ  9611875313,  9164630384,  9901685718,  8722080832,  9480074457 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News