ಲಾಕ್ ಡೌನ್: 80 ಕಿಮೀ ದೂರದ ಊರಿಗೆ ಕಾಲ್ನಡಿಗೆಯಲ್ಲಿ ಹೊರಟ ಯುವಕರು

Update: 2020-03-25 12:36 GMT

ಲಕ್ನೋ: ಬಿಸಿಲಿನ ಝಳವನ್ನು ಲೆಕ್ಕಿಸಿದೆ ಯುವಕರ ತಂಡವೊಂದು ದೇಶಾದ್ಯಂತ ಲಾಕ್ ಡೌನ್ ಇರುವ ಹೊರತಾಗಿಯೂ 80 ಕಿಮೀ ದೂರದ ತಮ್ಮ ಊರಿಗೆ ಹೊರಟಿದೆ. ಉನ್ನಾವೋ ಎಂಬಲ್ಲಿನ ಸ್ಟೀಲ್ ಫ್ಯಾಬ್ರಿಕೇಶನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ  20 ಯುವಕರು ಈ ತಂಡದಲ್ಲಿದ್ದು ತಂತಮ್ಮ ಮನೆಗಳಿಗೆ ಹಿಂದಿರುಗದೆ ತಮಗೆ ಅನ್ಯದಾರಿಯಿಲ್ಲ ಎಂದು ಅವರು  ಹೇಳುತ್ತಿದ್ದಾರೆ.

ಕಂಪೆನಿ ಅವರಿಗೆ ವಸತಿ ಸೌಕರ್ಯ ನೀಡಿದ್ದರೂ ಅವುಗಳನ್ನು ಬಿಟ್ಟು ತೆರಳುವಂತೆ ಅವರಿಗೆ ಕಳೆದ ರಾತ್ರಿ ಅವರ ಮಾಲಕ ಸೂಚನೆ ನೀಡಿದ್ದರಿಂದ ಉಳಿಯಲು ಬೇರೆ ಜಾಗವಿಲ್ಲದೆ ಅವರು ಯಾವುದೇ ಸಾರಿಗೆ ಸೌಲಭ್ಯವೂ ಇಲ್ಲದೆ ನಡೆದುಕೊಂಡೇ ಹೋಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

 ನೀರು ಮತ್ತು ಸ್ವಲ್ಪ ಬಿಸ್ಕತ್ತುಗಳೇ ಅವರಿಗೆ ಈ ದೀರ್ಘ ಪಯಣದಲ್ಲಿ  ಆಧಾರವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News