ಕರ್ತವ್ಯಕ್ಕೆ ತೆರಳುತ್ತಿದ್ದ ವೈದ್ಯರಿಗೆ ಕಿರುಕುಳ ನೀಡಿ ಅವಮಾನಿಸಿದ 'ರಿಪಬ್ಲಿಕ್ ಟಿವಿ' ಪತ್ರಕರ್ತ: ಆರೋಪ

Update: 2020-03-25 14:06 GMT

ಹೊಸದಿಲ್ಲಿ: ದಿಲ್ಲಿ ಹಾಗೂ ನೋಯ್ಡಾ ನಡುವೆ ಸಂಪರ್ಕ ಕಲ್ಪಿಸುವ ಡಿಎನ್‍ ಡಿ ಫ್ಲೈ ಓವರ್‍ ನಲ್ಲಿ ತಮ್ಮ ಕರ್ತವ್ಯ ನಿಮಿತ್ತ ಸಾಗುತ್ತಿದ್ದ ಹಿರಿಯ ವೈದ್ಯ ಹಾಗೂ ನೊಯ್ಡಾದ ಇಎಸ್‍ಐಸಿ ಆಸ್ಪತ್ರೆಯ ನಿರ್ದೇಶಕ ಹಾಗೂ ಮೆಡಿಕಲ್ ಸುಪರಿಂಟೆಂಡೆಂಟ್ ಅನೀಶ್ ಸಿಂಘಾಲ್ ಅವರಿಗೆ ರಿಪಬ್ಲಿಕ್ ಟಿವಿಯ ವರದಿಗಾರರೊಬ್ಬರು ಕಿರುಕುಳ ನೀಡಿ, ವೈದ್ಯರ ಬಳಿಯಿದ್ದ ಐಡಿ ಕಾರ್ಡನ್ನು 'ನಕಲಿ' ಎಂದು ಹೇಳಿ ಅವಮಾನಿಸಿದ ಘಟನೆ ನಡೆದಿದೆ.

'ವ್ಯಕ್ತಿಯೊಬ್ಬ ತನ್ನ ನಕಲಿ ಐಡಿ ತೋರಿಸಿ ಹೊರಕ್ಕೆ ಹೋಗಲು ಯತ್ನಿಸುತ್ತಿದ್ದಾನೆ' ಎಂದು ಹೇಳಿದ ವರದಿಗಾರ, ವೈದ್ಯರು ತೋರಿಸಿದ ಐಡಿ ಕಾರ್ಡನ್ನು ಕ್ಯಾಮರಾ ಮುಂದೆ ಪ್ರದರ್ಶಿಸಿ ಅದನ್ನು `ನಕಲಿ' ಎಂದು ಆರೋಪಿಸಿದ್ದಾರೆ.

ಫ್ಲೈ ಓವರ್‍ ನಲ್ಲಿದ್ದ ಚೆಕ್ ಪಾಯಿಂಟ್ ಮುಖಾಂತರ ಸಾಗಲು ಪೊಲೀಸರಲ್ಲಿ ಸಿಂಘಾಲ್ ಅನುಮತಿ ಕೇಳುತ್ತಿದ್ದ ಸಂದರ್ಭ ವರದಿಗಾರ ಅವರನ್ನು ಅವಮಾನಿಸಿದ ಘಟನೆ ನಡೆದಿತ್ತು.

ಈ ಘಟನೆ ನಡೆದ ನಂತರ ಇಎಸ್‍ಐಸಿ ಸ್ಪಷ್ಟೀಕರಣ ನೀಡಿ ಕರ್ತವ್ಯಕ್ಕೆ ತೆರಳುತ್ತಿದ್ದ ನಿರ್ದೇಶಕರನ್ನು ವರದಿಗಾರ ತಡೆದಿದ್ದಾರೆಂದು ಹೇಳಿತಲ್ಲದೆ ವೈದ್ಯರ ಗುರುತು ಹಾಗೂ ಅವರು ಹೊಂದಿದ್ದ ಹುದ್ದೆಯ ವಿವರವನ್ನೂ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News