ಕೊರೋನವೈರಸ್: ಸುಳ್ಳುಸುದ್ದಿ ಪ್ರಕಟಿಸಿದ್ದ ದೈನಿಕದ ವಿರುದ್ಧ ಪ್ರಕರಣ
Update: 2020-03-26 23:19 IST
ಜಮ್ಮು, ಮಾ. 26: ಜಮ್ಮು ವಿಭಾಗದ ಪೂಂಛ್ ಜಿಲ್ಲೆಯಲ್ಲಿ ಕೊರೋನವೈರಸ್ ಕುರಿತು ಸುಳ್ಳುಸುದ್ದಿಯನ್ನು ಪ್ರಕಟಿಸಿದ್ದಕ್ಕಾಗಿ ಉರ್ದು ದೈನಿಕವೊಂದರ ಮಾಲಿಕ ಮತ್ತು ವರದಿಗಾರನ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪೂಂಛ್‌ನಲ್ಲಿ ಆರು ಜನರಲ್ಲಿ ಕೊರೋನವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂಬ ಸುಳ್ಳುಸುದ್ದಿಯು ದೈನಿಕದಲ್ಲಿ ಪ್ರಕಟಗೊಂಡಿದ್ದು ಇದು ಸ್ಥಳೀಯರಲ್ಲಿ ಭೀತಿ ಮತ್ತು ಗೊಂದಲವನ್ನು ಸೃಷ್ಟಿಸಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಅಧಿಕಾರಿಗಳಿಂದ ದೃಢಪಡಿಸಿಕೊಳ್ಳದೆ ಕೊರೋನವೈರಸ್ ಕುರಿತು ಯಾವುದೇ ಸುದ್ದಿಯನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಜಮ್ಮು-ಕಾಶ್ಮೀರ ಆಡಳಿತವು ಮಾಧ್ಯಮಗಳನ್ನು ಕೋರಿಕೊಂಡಿದೆ.