ಫೇಕ್ ನ್ಯೂಸ್ ವೈರಸ್ : ಬಿಲ್ ಗೇಟ್ಸ್ ಹೆಸರಲ್ಲಿ ಹರಡುತ್ತಿದೆ ಅವರು ಬರೆದೇ ಇಲ್ಲದ ಬಹಿರಂಗ ಪತ್ರ

Update: 2020-03-27 05:54 GMT
Photo: Twitter(@BillGates)

ಕೊರೊನ ವೈರಸ್ ನಷ್ಟೇ ವೇಗವಾಗಿ ಹರಡುತ್ತಿರುವ ಸುಳ್ಳು ಸುದ್ದಿಗಳ ಸಾಲಿಗೆ ಹೊಸ ಸೇರ್ಪಡೆ ಈ ಮಾರಕ ವೈರಸ್ ಕುರಿತು ಬಿಲ್ ಗೇಟ್ಸ್ ಬರೆದಿದ್ದಾರೆ ಎಂದು ವ್ಯಾಪಕವಾಗಿ ಹರಡುತ್ತಿರುವ ಒಂದು ಬಹಿರಂಗ ಪತ್ರ. ಕೊರೊನ ವೈರಸ್ ಹಾವಳಿಯಲ್ಲಿ ನಮಗೆ ಹಲವು ಆಧ್ಯಾತ್ಮಿಕ ಸಂದೇಶವಿದೆ ಎಂದು ಹೇಳುವ ಈ ವಿವರವಾದ ಪತ್ರವನ್ನು ಬಿಲ್ ಗೇಟ್ಸ್ ಬರೆದೇ ಇಲ್ಲ !

“What is the Corona/Covid-19 Really Teaching us?” ( ಕೊರೊನ / ಕೋವಿಡ್-19 ನಮಗೆ ಕಲಿಸುವ ಪಾಠವೇನು ?) ಎಂಬ ಶೀರ್ಷಿಕೆಯ ಈ ಪತ್ರ ಸೋಮವಾರದಿಂದ ಇಮೇಲ್, ವಾಟ್ಸಾಪ್ ಗಳ ಮೂಲಕ ಹರಡುತ್ತಿದೆ.  ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯ ಹಿಂದೆ ಆಧ್ಯಾತ್ಮಿಕ ಉದ್ದೇಶವೊಂದಿದೆ ಎಂದು ಈ ಪತ್ರ ಪ್ರಾರಂಭವಾಗಿ ಅದೇ ಧಾಟಿಯಲ್ಲಿ ಮುಂದುವರೆಯುವ ಈ ಪತ್ರ, ಕೊರೋನವೈರಸ್ ' ದಿ ಗ್ರೇಟ್ ಕರೆಕ್ಟರ್ ( ತಪ್ಪನ್ನು ಸರಿಪಡಿಸುವ ಸಾಧನ )' ಎಂದು ಬಣ್ಣಿಸಿ ನಾವು ಮರೆತಿರುವ ಪಾಠಗಳನ್ನು ನೆನಪಿಸಲು ಇದು ಬಂದಿದೆ ಎಂದು ಹೇಳುತ್ತದೆ.

ಈಗ ಬಿಲ್ ಗೇಟ್ಸ್ ಬರೆದೇ ಇಲ್ಲದ ಈ ಪತ್ರವನ್ನು ಅವರು ಬರೆದಿದ್ದಾರೆ ಎಂದು ಸಾಮಾನ್ಯರು ಮಾತ್ರವಲ್ಲದೆ ಹಲವು ಸೆಲೆಬ್ರಿಟಿಗಳು ಕೂಡ ಶೇರ್ ಮಾಡುತ್ತಿದ್ದಾರೆ.  ಇದರ ಪರಿಣಾಮ ಎಲ್ಲಿವರೆಗೆ ಆಗಿದೆಯೆಂದರೆ ಖ್ಯಾತ ಪತ್ರಿಕೆ 'ದಿ ಸನ್' ಇದರ ಬಗ್ಗೆ ಒಂದು ವಿಶೇಷ ವರದಿಯನ್ನೇ ಪ್ರಕಟಿಸಿತು. ಬಳಿಕ ಇದು ಫೇಕ್ ಎಂದು ಗೊತ್ತಾದ ಮೇಲೆ ಅದು ಕ್ಷಮೆ ಯಾಚಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News