ನೆನಪಿರಲಿ...: ಲಾಕ್‍ ಡೌನ್ ವೇಳೆ ರಸ್ತೆಗಿಳಿಯಬೇಕಾದರೆ ಈ ದಾಖಲೆಗಳು ಅತ್ಯಗತ್ಯ

Update: 2020-03-27 07:43 GMT

ಹೊಸದಿಲ್ಲಿ:  ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆಯೂ ಜಾರಿಯಲ್ಲಿರುವ ಕಾರಣ ರಸ್ತೆಗಿಳಿಯಬೇಕಾದಲ್ಲಿ ಕೆಲವೊಂದು ದಾಖಲೆಗಳು ಅಗತ್ಯ. ಯಾವುದೇ ದಾಖಲೆಗಳನ್ನು ಹಾಜರುಪಡಿಸುವುದರಿಂದ ವಿನಾಯಿತಿ ಹೊಂದಿರುವ ಸರಕಾರಿ ಸಿಬ್ಬಂದಿ ತಮ್ಮ ಜತೆಗೆ ಗುರುತು ಕಾರ್ಡ್ ಗಳನ್ನು ಮಾತ್ರ ಹೊಂದಿರಬೇಕಾಗಿದೆ.

ಯಾವುದೇ ಪಾಸ್ ಅಗತ್ಯವಿಲ್ಲದೇ ಇರುವವರು

►ಹತ್ತಿರದ ಅಂಗಡಿಗಳಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅಥವಾ ಔಷಧಿ ಖರೀದಿಸಲು ತೆರಳುವವರು ಅಥವಾ ತುರ್ತು  ಚಿಕಿತ್ಸೆಗಾಗಿ ತೆರಳುವವರು. ಇಬ್ಬರಿಗಿಂತ ಹೆಚ್ಚು ಮಂದಿ  ಜತೆಯಾಗಿ ಹೋಗಲು ಅನುಮತಿಯಿಲ್ಲ.

►ಕೃಷಿ, ಹೈನುಗಾರಿಕೆ ಅಥವಾ ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿರುವವರು.

ತಮ್ಮ ಉದ್ಯೋಗದಾತರಿಂದ ನೀಡಲಾದ ಐಡಿ ಕಾರ್ಡ್ ಅಗತ್ಯವಿರುವವರು

►ವೈದ್ಯಕೀಯ ಸಿಬ್ಬಂದಿ, ದಾದಿಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ  ಇತರ ಆರೋಗ್ಯ ಸೇವಾ ಸಂಸ್ಥೆಗಳ ಸಿಬ್ಬಂದಿ.

►ವಿದ್ಯುತ್, ಜಲ, ಬ್ಯಾಂಕ್ ಹಾಗೂ ಇತರ ಸಾರ್ವಜನಿಕ ಸೇವಾ ಸಂಸ್ಥೆಗಳು ಹಾಗೂ ಪೆಟ್ರೋಲಿಯಂ, LPG ಹಾಗೂ CNG ವಿತರಕ ಸಂಸ್ಥೆಗಳ ಉದ್ಯೋಗಿಗಳು.

►ಮಾಧ್ಯಮ ಸಂಸ್ಥೆಗಳ  ಉದ್ಯೋಗಿಗಳು ಹಾಗೂ ಸುದ್ದಿ ಪತ್ರಿಕೆಗಳ ವಿತರಕರು.

►ರೈಲ್ವೆ/ ವಿಮಾನ ನಿಲ್ದಾಣ ಸಿಬ್ಬಂದಿ  ಹಾಗೂ  ಅಗತ್ಯ ವಸ್ತುಗಳ ಹಾಗೂ ಸರಕುಗಳ ಸಾಗಾಟದಲ್ಲಿ ತೊಡಗಿರುವವರು.

►ಪೊಲೀಸರು/ ಸ್ಥಳೀಯ ಎಸ್ಡಿಒ ಅವರಿಂದ ದೃಢೀಕೃತ ಪತ್ರಗಳ ಅಗತ್ಯವುಳ್ಳವರು

►ಸಾರ್ವಜನಿಕ ವಿತರಣಾ ವ್ಯವಸ್ಥೆ, ಹೈಪರ್ ಮಾರ್ಟ್, ಸೂಪರ್ ಮಾರ್ಕೆಟ್, ಇ-ಕಾಮರ್ಸ್ ಸಂಸ್ಥೆಗಳು ಹಾಗೂ ಆಹಾರ ಹೋಂ ಡೆಲಿವರಿ ನಡೆಸುವ ಸಿಬ್ಬಂದಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News