ದಿಲ್ಲಿಯಲ್ಲಿ 325 ಶಾಲೆಗಳು 'ತಾತ್ಕಾಲಿಕ ಅಡಿಗೆ ಮನೆಗಳಾಗಿ' ಪರಿವರ್ತನೆ : ಸಿಎಂ ಕೇಜ್ರಿವಾಲ್

Update: 2020-03-27 08:07 GMT

ಹೊಸದಿಲ್ಲಿ, ಮಾ.27: ಕೊರೋನ ವೈರಸ್ ಲಾಕ್‌ಡೌನ್‌ನಿಂದ  ತೊಂದರೆಗೊಳಗಾಗಿರುವ  ಸುಮಾರು ನಾಲ್ಕು ಲಕ್ಷ ಬಡವರಿಗೆ ಆಹಾರವನ್ನು  ಒದಗಿಸಲು ದಿಲ್ಲಿಯಲ್ಲಿ  325 ಶಾಲೆಗಳನ್ನು 'ತಾತ್ಕಾಲಿಕ ಅಡಿಗೆಮನೆಗಳಾಗಿ  ಪರಿವರ್ತನೆ  ಮಾಡಲಾಗಿದೆ ಎಂದು ದಿಲ್ಲಿಯ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು  ಕೊರೋನ ವೈರಸ್‌ನ 3 ನೇ ಹಂತವನ್ನು ಎದುರಿಸಲು  ರಾಷ್ಟ್ರ ರಾಜಧಾನಿ ಸಿದ್ಧವಾಗಿದೆ. ಎದುರಿಸುವ ಯೋಜನೆಯನ್ನು ಸೂಚಿಸಲು ರಚಿಸಲಾದ ಐದು ಸದಸ್ಯರ ವೈದ್ಯರ ಸಮಿತಿ ತನ್ನ ಸಲ್ಲಿಸಿದೆ ವರದಿ.

"325 ಶಾಲೆಗಳಲ್ಲಿ ಭೋಜನವನ್ನು ಒದಗಿಸಲು ನಾವು ವ್ಯವಸ್ಥೆ ಮಾಡಿದ್ದೇವೆ. ಈ ಎಲ್ಲಾ ಶಾಲೆಗಳಲ್ಲಿ ಸುಮಾರು 500 ಜನರಿಗೆ ಆಹಾರವನ್ನು ನೀಡಲಾಗುವುದು. ಇಲ್ಲಿಯವರೆಗೆ ನಾವು ಪ್ರತಿದಿನ 20,000 ಜನರಿಗೆ ಆಹಾರವನ್ನು ನೀಡುತ್ತಿದ್ದೆವು, ಈ ಸಂಖ್ಯೆ ಇಂದಿನಿಂದ ಸುಮಾರು 2,00,000 ಕ್ಕೆ ಹೆಚ್ಚಾಗುತ್ತದೆ,  ಎಂದು  ಕೇಜ್ರಿವಾಲ್ ಹೇಳಿದ್ದಾರೆ.

"ನಾಳೆಯಿಂದ ಈ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು, ನಾವು ಪ್ರತಿದಿನ 4,00,000 ಜನರಿಗೆ ಆಹಾರವನ್ನು ನೀಡುತ್ತೇವೆ. " ಎಂದು ಅವರು  ಮಾಹಿತಿ ನೀಡಿದರು.

ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 39 ಕೋವಿಡ್  -19 ಪ್ರಕರಣಗಳು ವರದಿಯಾಗಿವೆ, ಅದರಲ್ಲಿ 29 ಪ್ರಕರಣಗಳು ಹೊರಗಿನಿಂದ ಬಂದಿದ್ದು, ಈ ಪೈಕಿ ಹತ್ತು ಪ್ರಕರಣಗಳು 'ಸ್ಥಳೀಯ ಪ್ರಸರಣ'ದ ಪ್ರಕರಣಗಳಾಗಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News