ಉಪ್ಪಿನಂಗಡಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಅನಿಲ ಸೋರಿಕೆ

Update: 2020-03-28 04:38 GMT

ಉಪ್ಪಿನಂಗಡಿ, ಮಾ.28: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿ ತಿರುವಿನಲ್ಲಿ ಅನಿಲ ಸಾಗಾಟದ ಬುಲೆಟ್ ಟ್ಯಾಂಕರೊಂದು ಶನಿವಾರ ಮುಂಜಾನೆ ಮಗುಚಿ ಬಿದ್ದಿದೆ. ಈ ವೇಳೆ ಟ್ಯಾಂಕರ್ ಹಾನಿಗೀಡಾಗಿದ್ದು, ಅನಿಲ ಸೋರಿಕೆ ಉಂಟಾಗಿದೆ ಎಂದು ತಿಳಿದುಬಂದಿದೆ.

ಶನಿವಾರ ಮುಂಜಾನೆ ಬೆದ್ರೋಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಮಗುಚಿ ರಸ್ತೆ ಬದಿಗೆ ಬಿದ್ದಿದೆ. ಈ ವೇಳೆ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಈ ವೇಳೆ ಅನಿಲ ಸೋರಿಕೆ ಉಂಟಾಗಿದ್ದು, ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.

ಸ್ಥಳಕ್ಕೆ ಎಚ್.ಪಿ. ತುರ್ತು ನಿರ್ವಹಣಾ ದಳ, ಅಗ್ನಿಶಾಮಕ ದಳ, ಹಾಗೂ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದು, ಅನಿಲ ಸೋರಿಕೆ ತಡೆಗಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News