‘ವಾಟ್ಸ್ಯಾಪ್ ಮೂಲಕ ಔಷಧಿ’: ಕೆ.ಎಸ್.ಹೆಗ್ಡೆ ಆಸ್ಪತ್ರೆಯಿಂದ ಟೆಲಿಮೆಡಿಸಿನ್ ಸೇವೆ ಆರಂಭ

Update: 2020-03-28 07:22 GMT

ಕೊಣಾಜೆ, ಮಾ 28: ಕೊರೋನ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ದೇಶದಲ್ಲಿ ಲಾಕ್‌ಡೌನ್ ಘೋಷಣೆಯ ಬಳಿಕ ಜಿಲ್ಲೆಯಲ್ಲಿ ಹಲವು ಆಸ್ಪತ್ರೆಗಳು ಹೊರ ರೋಗಿಗಳಿಗೆ ನೀಡುವ ಚಿಕಿತ್ಸಾ ಸೇವೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಅನೇಕ ರೋಗಿಗಳು ಸಕಾಲಕ್ಕೆ ವೈದ್ಯರ ಸಲಹೆ, ಔಷಧಗಳು ಸಿಗದೆ ತೊಂದರೆಗೀಡಾಗಿದ್ದಾರೆ. ಇದನ್ನು ಮನಗಂಡು ನಗರದ ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆ ವಿನೂತನವಾಗಿ ರೋಗಿಗಳ ಸೇವೆ ಆರಂಭಿಸಿದೆ. ಸಾರ್ವಜನಿಕರಿಗೆ ಓಡಾಟಕ್ಕೆ ಅವಕಾಶ ಇಲ್ಲದ ಕಾರಣ ಕೆ.ಎಸ್.ಹೆಗ್ಡೆ ಆಸ್ಪತ್ರೆಯೂ ಆನ್‌ಲೈನ್ ಮೂಲಕ ‘ಟೆಲಿಮೆಡಿಸಿನ್’ ಸೇವೆ ಆರಂಭಿಸಿದೆ.

ಈ ಸೇವೆಯಂತೆ ಅಗತ್ಯವಿದ್ದವರು ಮನೆಯಲ್ಲೇ ಕುಳಿತು ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ರೋಗಿಗಳ ಆರೋಗ್ಯ ಸಮಸ್ಯೆಗಳಿಗೆ ವಾಟ್ಸ್ಯಾಪ್ ಮೂಲಕ ಸಲಹೆ ಮತ್ತು ಔಷಧ ನೀಡಲಿದ್ದಾರೆ. ಇದಕ್ಕಾಗಿ 10 ವಿಭಾಗಗಳ ತಜ್ಞ ವೈದ್ಯರುಗಳ ತಂಡ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಅಗತ್ಯ ಸೇವೆಗಾಗಿ ಸಿದ್ಧವಾಗಿದೆ ಎಂದು ಜಸ್ಟೀಸ್ ಕೆ.ಎಸ್.ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

ರೋಗಿಗಳು ಈ ಕೆಳಗೆ ನೀಡಿರುವ ವಾಟ್ಸ್ಯಾಪ್ ನಂಬರ್‌ಗೆ ತಮ್ಮ ರೋಗ ಲಕ್ಷಣ ಮಾಹಿತಿಯನ್ನು ರವಾನಿಸಬೇಕು. ಇದರೊಂದಿಗೆ ಹೆಸರು, ವಯಸ್ಸು, ಲಿಂಗ, ತೂಕ, ಖಾಯಿಲೆಯ ವಿವರ ಹಾಗೂ ಹಳೆಯ ಔಷಧಗಳಿದ್ದರೆ ಅದರ ಮಾಹಿತಿಯನ್ನು ತಪ್ಪದೆ ನೀಡಬೇಕು. ಇವೆಲ್ಲವನ್ನು ಪರಿಶೀಲಿಸುವ ವೈದ್ಯರು ಅಗತ್ಯಬಿದ್ದರೆ ಸಂಬಂಧಪಟ್ಟ ರೋಗಿಗೆ ಕರೆ ಮಾಡುತ್ತಾರೆ ಇಲ್ಲವಾದರೆ, ಯಾವ ಔಷಧಿ ಸೂಕ್ತ ಎಂಬ ಸಲಹೆಯನ್ನು ವೈದ್ಯರ ನೋಂದಣಿ ಸಂಖ್ಯೆವಿರುವ ಚೀಟಿಯಲ್ಲಿ ಬರೆದು ರೋಗಿಗಳ ಸಂಖ್ಯೆಗೆ ವಾಟ್ಸ್ಯಾಪ್ ಮಾಡುವರು. ಬಳಿಕ ಔಷಧಿಯನ್ನು ಸಮೀಪದ ಮೆಡಿಕಲ್‌ನಲ್ಲಿ ಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News