ಲಾಕ್ ಡೌನ್: ಕೆಸಿಸಿ ಚಾರಿಟೇಬಲ್ ಟ್ರಸ್ಟ್ ಆನ್ಲೈನ್ ಚಿಕಿತ್ಸಾ ಸೇವೆ

Update: 2020-03-28 14:49 GMT

ಮಂಗಳೂರು : ಕೊರೋನ ವೈರಸ್ ಭೀತಿ ಹಿನ್ನೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಆಗಿದ್ದು, ಜನರಿಗೆ ಎಂದಿನಂತೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಲು ಸಾಧ್ಯವಾಗದವರಿಗಾಗಿ ಕೆಸಿಸಿ ಚಾರಿಟೇಬಲ್ ಟ್ರಸ್ಟ್ ಆನ್ಲೈನ್ ಚಿಕಿತ್ಸಾ ಸೇವೆ ಆರಂಭಿಸಿದೆ. 

ಈ ಸೇವೆಯಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ, ಗುಜರಾತಿ ಸಹಿತ ಲೋಕಲ್ ಭಾಷೆಗಳಲ್ಲಿನ ಕೆಸಿಸಿ ಟ್ರಸ್ಟ್  ಸುಮಾರು 14 ವಿಭಾಗಗಳ ವೈದ್ಯರುಗಳು ಮನೆಯಲ್ಲಿ ಕುಳಿತು ಕಷ್ಟಪಡುವ ರೋಗಿಗಳ ಸೇವೆಗೆ ಸದಾ ಸಿದ್ಧರಿರುತ್ತಾರೆ ಮತ್ತು ಅವಶ್ಯಕತೆ ಇದ್ದಲ್ಲಿ ಎಮರ್ಜೆನ್ಸಿ ಆಗಿ ಆಸ್ಪತ್ರೆಗೆ ಸಾಗಿಸಲು ಟ್ರಸ್ಟ್  ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಮತ್ತು ಅವಶ್ಯಕತೆ ಇದ್ದಲ್ಲಿ ಮನೆಗೆ ಭೇಟಿ ನೀಡಿ,  ರಕ್ತಪರೀಕ್ಷೆ ಮಾಡಲಾಗುವುದು ಎಂದು ಟ್ರಸ್ಟಿನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅವಶ್ಯಕತೆ ಇರುವವರು ತಮ್ಮ ಹೆಸರು, ವಯಸ್ಸು, ರೋಗ ಲಕ್ಷಣಗಳು, ಯಾವುದಾದರೂ ಮಾತ್ರೆಯನ್ನು ಸೇವಿಸುತ್ತಿದ್ದರೆ ಅದರ ಮಾಹಿತಿ, ಹಳೆಯ ರಿಪೋರ್ಟ್ ಗಳಿದ್ದರೆ ಅದನ್ನು ಸಹಿತ ವಾಯ್ಸ್ ಅಥವಾ ಟೆಕ್ಸ್ಟ್ ಮೂಲಕ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸಂದೇಶ ಕಳುಹಿಸಿ, ಚಿಕಿತ್ಸೆ ಪಡೆದುಕೊಳ್ಳಬಹುದು. ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಅಗತ್ಯವಿದ್ದರೆ ರೋಗಿಗೆ ವೈದ್ಯರು ನೇರವಾಗಿ ಕರೆ ಮಾಡಿ ಚಿಕಿತ್ಸೆ ತಿಳಿಸುವರು.

ವಾಟ್ಸ್ಆ್ಯಪ್ ಮಾಡಬೇಕಾದ ಸಂಖ್ಯೆ :08884333630, 096136 32020, 09745154155 ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News