ಉದ್ಯಾವರ ಪರಿಸರದ 25 ಬಡವರಿಗೆ ಊಟದ ವ್ಯವಸ್ಥೆ

Update: 2020-03-28 15:24 GMT

ಉಡುಪಿ, ಮಾ.28: ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯಾವರ ಗ್ರಾಮದ ಮತ್ತು ಆಸುಪಾಸಿನ 25 ಮಂದಿಗೆ ಇಂದು ಗುಡ್ಡೆಯಂಗಡಿ ಫ್ರೆಂಡ್ಸ್ ನೇತೃತ್ವದಲ್ಲಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಅವರ ಸಹಕಾರದೊಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು.

ಗುಡ್ಡೆಯಂಗಡಿ ಫ್ರೆಂಡ್ಸ್ ಸದಸ್ಯ ಮತ್ತು ಗ್ರಾಪಂ ಸದಸ್ಯ ದಿವಾಕರ ಬೊಳ್ಜೆ ಗ್ರಾಮದ ಹಲವಾರು ಮಂದಿಗೆ ಔಷಧಿ ವ್ಯವಸ್ಥೆ ಮಾಡಿದರು. ಯುವ ಮುಂದಾಳು ಸಚಿನ್ ಸಾಲ್ಯಾನ್ ಬೊಳ್ಜೆ ನೇತೃತ್ವದಲ್ಲಿ ಗುಡ್ಡೆಯಂಗಡಿ ಫ್ರೆಂಡ್ಸ್ ತಂಡದ ಸದಸ್ಯರು ಇಂದಿನಿಂದ ಪ್ರತಿದಿನ ಅಗತ್ಯವಿರುವ ಬಡ ಜನರಿಗೆ ಊಟ ಮತ್ತು ಔಷಧ, ದಿನಸಿ ವಸ್ತುಗಳನ್ನು ಮನೆ ತನಕ ತಲುಪಿಸಲು ಸಿದ್ಧವಾಗಿದ್ದು, ಮೊದಲ ದಿನವೇ 25 ಜನರಿಗೆ ಮತ್ತು ಹಲವಾರು ಮಂದಿಗೆ ಔಷಧಿಯನ್ನು ನೀಡಿದೆ.

ಈ ಸಂದರ್ಭದಲ್ಲಿ ಸಚಿನ್ ಸಾಲ್ಯಾನ್ ಬೊಳ್ಜೆ, ದಿವಾಕರ ಬೊಳ್ಜೆ, ಸತೀಶ್ ಪೂಜಾರಿ, ಉದಯ ಕರ್ಕೇರ, ಗ್ರಾಪಂ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಸದಸ್ಯ ರಾದ ಕಿರಣ್ ಕುಮಾರ್, ಲಕ್ಷ್ಮಣ ಪೂಜಾರಿ, ಸಂಘಟನೆಯ ಪ್ರಮುಖರಾದ ಸದಾಶಿವ ಕಟ್ಟೆಗುಡ್ಡೆ, ಸ್ಟೀವನ್ ಕುಲಾಸೊ, ಇರ್ಫಾನ್ ಆರೂರು ತೋಟ, ರೊಯ್ಸ್ ಫೆರ್ನಾಂಡಿಸ್, ಪ್ರೇಮ್ ಮಿನೇಜಸ್, ಮಹೇಶ್, ಅನಿಲ್, ಪ್ರದೀಪ್, ಕಿಶೋರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News