'ವಿಜಯ ಕರ್ನಾಟಕ' ಪತ್ರಿಕೆ ವಿರುದ್ಧ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘ ದೂರು

Update: 2020-03-28 15:51 GMT

ಮಂಗಳೂರು, ಮಾ.28: 'ವಿಜಯ ಕರ್ನಾಟಕ' ದಿನಪತ್ರಿಕೆಯ ಮಾ.28ರ ಸಂಚಿಕೆಯ ಮೊದಲ ಪುಟದಲ್ಲಿ 'ಸತ್ತವರೆಲ್ಲ ಒಂದೇ ಸಮುದಾಯದವರು' ಎಂಬ ತಲೆಬರಹದಲ್ಲಿ ವರದಿಯೊಂದು ಪ್ರಕಟವಾಗಿದೆ. ಈ ವರದಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ದೂರು ನೀಡಿದೆ.

ಇದೊಂದು ಕೋಮು ಪ್ರಚೋದನಕಾರಿ ವರದಿಯಾಗಿದ್ದು, ಒಂದು ಧರ್ಮದ ಜನರ ಭಾವನೆಗಳನ್ನು ಕೆರಳಿಸಿ, ಸಮಾಜದಲ್ಲಿ ದೊಂಬಿ, ಗಲಭೆಗೆ ಕುಮ್ಮಕ್ಕು ನೀಡುವಂತದ್ದಾಗಿದೆ. ವಿಶ್ವದಾದ್ಯಂತ ವ್ಯಾಪಿಸಿರುವ ಕೊರೋನ ವೈರಸ್ ಕರ್ನಾಟಕದಲ್ಲೂ ಹಬ್ಬಲು ಮುಸ್ಲಿಮರು ಕಾರಣವೆಂಬಂತೆ ಚಿತ್ರೀಕರಿಸಿರುವ ಈ ವರದಿಯ ಹಿಂದೆ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಮುಸ್ಲಿಮರ ವಿರುದ್ಧ ಬೇರೆ ಧರ್ಮದ ಜನರನ್ನು ಎತ್ತಿಕಟ್ಟುವ ಷಡ್ಯಂತ್ರವಿದೆ. ಕೊರೋನ ಭೀತಿಯಿಂದಿರುವ ಸಮಾಜದಲ್ಲಿನ ಆತಂಕವನ್ನು ಈ ವರದಿ ಇಮ್ಮಡಿಗೊಳಿಸಿದೆ ಎಂದು ಕರ್ನಾಟಕ ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ದೂರಿನಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News