ಪಡುಬಿದ್ರಿ: ವಲಸೆ ಕಾರ್ಮಿಕರಿಂದ ಗಡಿದಾಟಲು ಯತ್ನ; ಪೊಲೀಸರಿಂದ ತಡೆ

Update: 2020-03-28 16:17 GMT

ಪಡುಬಿದ್ರಿ: ಉತ್ತರ ಕರ್ನಾಟಕ ಮೂಲದ ವಲಸೆ ಕಾರ್ಮಿಕರು ಉಡುಪಿ ಜಿಲ್ಲೆಯ ಗಡಿದಾಟಲು ಶನಿವಾರ ಯತ್ನಿಸಿದವರನ್ನು ಹೆಜಮಾಡಿ ಔಟ್‍ಪೋಸ್ಟ್ ನಲ್ಲಿ ಪೊಲೀಸರು ತಡೆದರು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ವಲಸೆ ಕಾರ್ಮಿಕರಾಗಿದ್ದ ಹಲವರು ಕಾಲ್ನಡಿಗೆಯಲ್ಲಿ ಹೆಜಮಾಡಿ ಔಟ್‍ಪೋಸ್ಟ್ ಮೂಲಕ ಗಡಿ ದಾಟುವ ಯತ್ನ ನಡೆಸಿದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡದೆ ವಾಪಾಸು ಕಳುಹಿಸಿದರು. ಇನ್ನು ಕೆಲವರು ವಾಪಾಸು ತೆರಳಿ ಒಳ ರಸ್ತೆಯ ಮೂಲಕ ಗಡಿ ದಾಟಿ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಮೂಲಕ ಉಡುಪಿಯತ್ತ ತೆರಳಿದರು.

ನಾವು ನಡೆದುಕೊಂಡು ಊರಿಗೆ ಹೋಗಬೇಕು. ವಾಹನವನ್ನು ಬಳಸಲು ಬಿಡುತಿಲ್ಲ. ಕೂಲಿ ಕೆಲಸ ಮಾಡಿಕೊಂಡಿದ್ದೆವು. ಆದರೆ ಹೊಟ್ಟೆಗೆ ತಿನ್ನಲು ಇಲ್ಲ. ಶಾಲೆಗೆ ಮಕ್ಕಳಿಗೆ ರಜೆ ಇದೆ. ನಾವು ಇಲ್ಲಿ ಕುಳಿತುಕೊಂಡು ಏನು ಮಾಡಬೇಕು ಎನ್ನುತ್ತಾರೆ ಕೂಲಿ ಕಾರ್ಮಿಕರು. 

ಇದೇ ವೇಳೆ ಇನ್ನು ಕೆಲವರು ಹೆಜಮಾಡಿಯಲ್ಲಿ ಒಳರಸ್ತೆ ಬಳಸಿಕೊಂಡು ಪಡುಬಿದ್ರಿ ಮೂಲಕ ಊರಿಗೆ ಮರಳಲು ಯತ್ನಿಸಿದ ವಲಸೆ ಕಾರ್ಮಿಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮಂಗಳೂರಿಗೆ ವಾಪಾಸು ತೆರಳಲು ಮುಂದಾಗಿದ್ದಾರೆ. 
ಇದೇ ವೇಳೆ ಲಾರಿ ಚಾಲಕರು ಹಾಗೂ ವಲಸೆ ಕೂಲಿ ಕಾರ್ಮಿಕರಿಗೆ ಫಲಿಮಾರು ಮೂಲಕ ಊಟವನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. 

ಪೆಟ್ರೋಲ್ ಉಚಿತ: ಪಡುಬಿದ್ರಿ ಕಂಚಿನಡ್ಕದ ಭಾರತ್ ಪೆಟ್ರೋಲಿಯಮ್ ಸಂಸ್ಥೆಯಲ್ಲಿ ಉಚಿತ ಪೆಟ್ರೋಲ್, ಡಿಸೆಲ್ ವಿತರಣೆ ನಡೆಯಿತು. 
ಜಗಜೀವನ್ ಚೌಟ ಇವರ ಮಾಲಿಕತ್ವದ ಪೆಟ್ರೋಲ್ ಬಂಕ್‍ನಲ್ಲಿ ಸಾಮಾಜಿಕ ಕಳಕಳಿಯಿಂದ ಶನಿವಾರ ಬೆಳಿಗ್ಗೆ 9 ರಿಂದ ಮದ್ಯಾಹ್ನ 12 ಗಂಟೆ ವರೆಗೆ ಪಡುಬಿದ್ರಿ ಠಾಣಾ ವ್ಯಪ್ತಿಯ  ಕರೋನಾ ಹರಡದಂತೆ ಕರ್ತವ್ಯ ದಲ್ಲಿರುವ ಪೋಲೀಸರು, ಆರೋಗ್ಯ ಅಧಿಕಾರಿಗಳು ಹಾಗೂ ಮಾಧ್ಯಮ ದವರಿಗಾಗಿ ಉಚಿತ ಪೆಟ್ರೋಲ್ ಮತ್ತು ಡಿಸೇಲ್ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News