ಮಾ. 29-30: ಹಾಲು ಸಂಗ್ರಹ ಸ್ಥಗಿತ; ಕೆಎಂಎಫ್‌

Update: 2020-03-28 16:24 GMT

ಮಂಗಳೂರು, ಮಾ.28: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರೋನ ವೈರಾಣು ಸಮಸ್ಯೆಯು ಬಿಗಡಾಯಿಸುತ್ತಿವೆ. ಆದರೆ ಲಾಕ್‌ಡೌನ್, ಸಂಪೂರ್ಣ ಬಂದ್ ಹಿನ್ನೆಲೆಯಲ್ಲಿ ನಂದಿನಿ ಹಾಲು ಮಾರಾಟಗಾರರಿಗೆ ಸಮಸ್ಯೆಯಾಗಿವೆ. ಅಲ್ಲದೆ ಶನಿವರದಿಂದ ಹಾಲು ಮಾರಾಟ ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕೂಡ ಸ್ಥಗಿತಗೊಂಡಿದೆ.

ಮಾ.22ರಿಂದ ಪ್ರತಿ ನಿತ್ಯ 1.0 ಲಕ್ಷ ಲೀಟರ್ ಹಾಲು ಮಾರಾಟ ಕಡಿಮೆಯಾಗಿದೆ. ಹಾಲನ್ನು ಪರಿವರ್ತನಾ ಘಟಕಗಳಿಗೆ ಕಳುಹಿಸಿದ್ದು, ಅಲ್ಲಿಯೂ ಸಹಾ ಸಾಮರ್ಥ್ಯ ಮೀರಿ ಹಾಲಿನ ದಾಸ್ತಾನು ಇರುವುದರಿಂದ ತಕ್ಷಣ ಪರಿವರ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಒಕ್ಕೂಟವು ಸಂಘಗಳಿಂದ ಹಾಲನ್ನು ಸ್ವೀಕರಿಸಿ ದಾಸ್ತಾನಿಡಲು ಸಾಧ್ಯವಾಗುತ್ತಿಲ್ಲ.

ಪ್ರಸ್ತುತದ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಅನಿವಾರ್ಯವಾಗಿ ಮಾ.29, 30ರಂದು ಹಾಲು ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ನಿತ್ಯದಂತೆ ಮುಂದುವರಿಯಲಿದೆ. ಮಾ.31ರಿಂದ ಗುಣಮಟ್ಟದ ಹಾಲು ಸಂಗ್ರಹಣೆ ಪುನರಾರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಹೈನುಗಾರರು ಸಹಕರಿಸುವಂತೆ ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News