ಭಟ್ಕಳ: ಮತ್ತೊಂದು ಕೊರೋನ ಪ್ರಕರಣ ದೃಢ

Update: 2020-03-28 16:33 GMT
ಸಾಂದರ್ಭಿಕ ಚಿತ್ರ

ಭಟ್ಕಳ : ಶನಿವಾರ ಭಟ್ಕಳದಲ್ಲಿ ಮೂವರಿಗೆ ಕೊರೋನ ವೈರಸ್ ದೃಢಪಟ್ಟ ಬೆನ್ನಹಿಂದೆಯೆ ಸಂಜೆಯಾಗುತ್ತಲೆ ಮತ್ತೊಂದು ಕೊರೋನ ಸೋಂಕು ಪೀಡಿತ ದೃಢಪಟ್ಟಿದ್ದು ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೆ ಸಾಗಿದ್ದು, ಭಟ್ಕಳದ ಜನರನ್ನು ಆತಂಕಕ್ಕೆ ಈಡುಮಾಡಿದೆ.

ಈತ (ಸೋಂಕಿತ ಸಂಖ್ಯೆ- 76) ಮಂಗಳೂರಿನಿಂದ ಮಾ.20ರಂದು ಭಟ್ಕಳಕ್ಕೆ ಹೋಗಿದ್ದು, ಸೋಂಕಿತ ಸಂ.35ರ ಸ್ನೇಹಿತನಾಗಿದ್ದಾನೆ. ಜಿಲ್ಲೆಯ ಮೊದಲ ಸೋಂಕಿತನಾದ ಸಂ.35ನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು, ಭಟ್ಕಳಕ್ಕೆ ಈತ ತನ್ನ ಕಾರಿನಲ್ಲಿ ಕರೆದು ಕೊಂಡು ಬಂದಿದ್ದ. ಬಳಿಕ ಆತನ ಮನೆಗೂ ತೆರಳಿ ಸೋಂಕಿತ ಸಂ.35ನ್ನು ಬಿಟ್ಟು ಬಂದಿದ್ದ ಎನ್ನಲಾಗಿದೆ.

ಇದಾದ ನಂತರ ಅರ್ಧ ಗಂಟೆಯಲ್ಲೇ ಸೋಂಕಿತ ಸಂ.35 ಅನುಮಾನದ ಮೇಲೆ ಆಸ್ಪತ್ರೆಗೆ ಸೇರಿದಾಗ ಆತನಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನದ ಮೇಲೆ‌ ಈತನ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಈ ಸ್ನೇಹಿತನಿಗೂ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News