ಎಂ.ಫ್ರೆಂಡ್ಸ್'ನಿಂದ ವೆನ್ಲಾಕ್, ಲೇಡಿಗೋಶನ್, ಪೊಲೀಸರಿಗೆ ಫೇಸ್ ಮಾಸ್ಕ್ ವಿತರಣೆ

Update: 2020-03-28 16:37 GMT

ಮಂಗಳೂರು: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ, ಬಂಟ್ವಾಳ ಲಯನ್ಸ್ ಕ್ಲಬ್ ಹಾಗೂ ಮೆಲ್ಕಾರ್, ಬಂಟ್ವಾಳ, ಪುಂಜಾಲಕಟ್ಟೆ, ವಿಟ್ಲ ಪೊಲೀಸ್ ಠಾಣೆಗೆ ಒಂದು ಸಾವಿರ ಮರು ಉಪಯೋಗ ಮಾಡುವ ಬಟ್ಟೆಯ ಫೇಸ್ ಮಾಸ್ಕನ್ನು ವಿತರಿಸುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಹಾಗೂ ಸದಸ್ಯರಾದ ರಫೀಕ್ ನೆಟ್ಲ ಮಾಸ್ಕ್ ವಿತರಿಸಿದರು.

ಎಂ. ಫ್ರೆಂಡ್ಸ್ ಕಾರುಣ್ಯ ಯೋಜನೆಯಲ್ಲಿ ಪ್ರತಿನಿತ್ಯ ವೆನ್ಲಾಕ್ ಐಸೋಲೇಶನ್ ವಾರ್ಡ್ ನಲ್ಲಿರುವ ಕೊರೋನ ಶಂಕಿತರಿಗೆ, ಇತರ ನೂರಾರು ರೋಗಿಗಳಿಗೆ, ಇತರ ಆಸ್ಪತ್ರೆಗಳ ರೋಗಿಗಳ ಜೊತೆಗಾರರಿಗೆ, ಮಂಗಳೂರು ಬೀದಿ ಬದಿಯ ನಿರಾಶ್ರಿತರಿಗೆ ರಾತ್ರಿಯ ಉಪಹಾರವನ್ನು ನೀಡುತ್ತಿದೆ. ಎಂ.ಫ್ರೆಂಡ್ಸ್ ಸಿಬ್ಬಂದಿ ಅಶ್ಫಾಕ್ ಹಾಗೂ ಎಸ್.ಕೆ. ಕೆಟರರ್ಸ್ ನ ಸೌಹಾನ್ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News