​ಜನಪ್ರತಿನಿಧಿಗಳು ಉತ್ತರಿಸಲಿ: ಮುನೀರ್ ಕಾಟಿಪಳ್ಳ

Update: 2020-03-28 16:57 GMT

ಮಂಗಳೂರು, ಮಾ.28: ಸತತ ಎರಡನೆಯ ದಿನವೂ ದ.ಕ. ಜಿಲ್ಲೆಯಲ್ಲಿ ತರಕಾರಿ, ದಿನಸಿ ಸೇರಿದಂತೆ ಆಹಾರ ಪದಾರ್ಥಗಳ ಮಾರಾಟಕ್ಕೆ ಪೂರ್ಣ ನಿಷೇಧ ಹೇರಲಾಗಿದೆ. ಈ ರೀತಿ ಪೂರ್ಣ ಬಂದ್ ಮಾಡಿದರೆ ಮನೆಯಲ್ಲಿ ಕೂತ ಜನರು ಹೊಟ್ಟೆಗೆ ಏನು ತಿನ್ನುವುದು? ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಬೆಂಗಳೂರು ಸಹಿತ ರಾಜ್ಯದಲ್ಲಿ ಆಹಾರ ಪದಾರ್ಥಗಳ ಅಂಗಡಿಗಳು ತೆರೆದಿರುವಾಗ ದ.ಕ.ಜಿಲ್ಲೆಯಲ್ಲಿ ಪ್ರತ್ಯೇಕವಾದ ಇಂತಹ ಕ್ರಮ ಯಾಕೆ? ದಿನಸಿ, ತರಕಾರಿ ಮುಗಿದಿರುವ ಕುಟುಂಬಗಳು ಏನು ಮಾಡಬೇಕು? ಸಾಮಾಜಿಕ ಅಂತರ ಕಾಯ್ದುಕೊಂಡು ಜನತೆ ಖರೀದಿ ಮಾಡುವ ಕ್ರಮ ಜಾರಿ ಮಾಡಲು ಏನು ಸಮಸ್ಯೆ ? ಪ್ರಯೋಗಗಳನ್ನು ಮಾಡುವಾಗ ಪೂರ್ವ ಸಿದ್ದತೆ ಮಾಡಬೇಡವೆ ? ಈ ಬಗ್ಗೆ ಜನಪ್ರತಿನಿಧಿಗಳು ಉತ್ತರಿಸಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News