ಕೈಯಲ್ಲಿ ಹಣವಿಲ್ಲ: ಕಾಲ್ನಡಿಗೆಯಲ್ಲಿ ರಾಜಸ್ಥಾನ ಪಯಣಕ್ಕೆ 40 ವಲಸಿಗರ ನಿರ್ಧಾರ

Update: 2020-03-28 18:37 GMT

ಹೊಸದಿಲ್ಲಿ,ಮಾ.28: ಲಾಕ್‌ಡೌನ್ ಬಳಿಕ ಉದ್ಯೋಗವಿಲ್ಲದೆ ಪರದಾಡುತ್ತಿರುವ ದಿಲ್ಲಿಯ 40 ಮಂದಿ ವಲಸಿಗ ಕಾರ್ಮಿಕರ ತಂಡವೊಂದು ಕೈಯಲ್ಲಿ ಹಣವಿಲ್ಲದ ಕಾರಣ, ಕಾಲ್ನಡಿಗೆಯಲ್ಲಿಯೇ 700 ಕಿ.ಮೀ. ದೂರದಲ್ಲಿರುವ ರಾಜಸ್ತಾನದ ಡುಂಗರ್‌ಪುರದಲ್ಲಿರುವ ತಮ್ಮ ಮನೆಗಳಿಗೆ ಹೋಗಲು ನಿರ್ಧರಿಸಿದ್ದಾರೆ.

ಮೂರು ವಾರಗಳಿಂದ ಇಲ್ಲಿ ಎಲ್ಲಾ ಕೆಲವೂ ನಿಂತಿದೆ. ಇಲ್ಲಿ ನಾವೇನು ಮಾಡವುದು, ನಾವೇನು ತಿನ್ನುವುದು. ನಮಗೆ ಮನೆಗಳಿಗೆ ಮರಳಬೇಕಿದೆ ಎಂದು ಕಾರ್ಮಿಕರಲ್ಲೊಬ್ಬಾದ ದೇವತ್ರ ರಾವತ್ ತಿಳಿಸಿದ್ದಾರೆ.

 ಉತ್ತರಪ್ರದೇಶ ಸೇರಿದಂತೆ ಕೆಲವು ರಾಜ್ಯ ಸರಕಾರಗಳು ದಿಲ್ಲಿಯಲ್ಲಿ ಅತಂತ್ರರಾಗಿರುವ ತಮ್ಮ ಕಾರ್ಮಿಕರನ್ನು ಕರೆತರಲು ಬಸ್‌ಗಳ ಏರ್ಪಾಡೂ ಮಾಡಿವೆಯಾದರೂ, ರಾಜಸ್ಥಾನ ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಹಸಿವು, ಅನಾರೋಗ್ಯದ ಅಪಾಯ

ಅರೆಹೊಟ್ಟೆಯಲ್ಲಿಯೇ ಪ್ರಯಾಣಿಸುತ್ತಿರುವ ಈ ವಲಸಿಗ ಕಾರ್ಮಿಕರು, ಮಾರಕವಾದ ಕೊರೋನ ವೈರಸ್ ಸೋಂಕರನ್ನು ಹರಡುವ ಸಾಧ್ಯತೆಯಿದೆಯೆಂದು ಕೇಂದ್ರ ಗೃಹ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ. ಆದರೆ ತಮ್ಮ ಪ್ರಯಾಣದ ಮಧ್ಯೆ ಅವರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯೂ ಇದೆ. ಇದರ ಜೊತೆಗೆ ಅವರ ಜೊತೆಗಿರುವ ನೂರಾರು ಮಕ್ಕಳು ಕೂಡಾ ಹಸಿವಿಗೆ ತುತ್ತಾಗುವ ಭೀತಿ ವ್ಯಕ್ತವಾಗಿದೆ.

 ದಿಲ್ಲಿಯಿಂದ ಗುಳೇ ಹೋಗುತ್ತಿರುವ ವಲಸಿಗ ಕಾರ್ಮಿಕರ ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ತನಕ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಈ ಸಮಸ್ಯೆಯ ಬಗ್ಗೆ ಗಮನಹರಿಸುವಂತೆ ಅದು ರಾಜ್ಯ ಸರಕಾರಗಳಿಗೆ ಸಲಹೆ ನೀಡಿದೆ.

ನಮ್ಮ ಕೈಯಲ್ಲೀಗ ಹಣವೂ ಇಲ್ಲ, ಆಹಾರವೂ ಇಲ್ಲ. ಇದಕ್ಕಿಂತ ಕುಟುಂಬದೊಂದಿಗೆ ಸಾಯವುದೇ ಲೇಸು.

ವಲಸಿಗ ಕಾರ್ಮಿಕನೊಬ್ಬನ ಅಳಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News