17 ದಿನಗಳ ಬಳಿಕವೂ ಪ್ರವಾಸಿ ಹಡಗಿನಲ್ಲಿ ಕೊರೋನ ಆರ್‌ಎನ್‌ಎ ಪತ್ತೆ

Update: 2020-03-28 19:01 GMT

ನ್ಯೂಯಾರ್ಕ್, ಮಾ. 28: ವಸ್ತುಗಳ ಮೇಲ್ಮೈಯಲ್ಲಿ ನೂತನ-ಕೊರೋನವೈರಸ್ ಎಷ್ಟು ದಿನಗಳ ಕಾಲ ಬದುಕಿರಬಲ್ಲದು ಎಂಬ ಪ್ರಶ್ನೆಗೆ ಉತ್ತರವನ್ನು ಬದಲಿಸಬೇಕಾದ ಸಮಯ ಹತ್ತಿರ ಬಂದಿದೆ. ಜಪಾನ್‌ನಲ್ಲಿ ಲಂಗರು ಹಾಕಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಕೊರೋನವೈರಸ್‌ನ ಆರ್‌ಎನ್‌ಎ 17 ದಿನಗಳ ಕಾಲ ಇತ್ತು ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಹೊಸ ಅಧ್ಯಯನವೊಂದು ತಿಳಿಸಿದೆ.

‘‘ಹಡಗಿನಿಂದ ಪ್ರವಾಸಿಗರನ್ನು ತೆರವುಗೊಳಿಸಿದ ಬಳಿಕ ಹಾಗೂ ಸೋಂಕು ನಿರೋಧಕಗಳನ್ನು ಸಿಂಪಡಿಸುವ ಮುನ್ನ, ರೋಗ ಲಕ್ಷಣಗಳನ್ನು ತೋರಿಸುತ್ತಿದ್ದ ಹಾಗೂ ತೋರಿಸದ ಕೊರೋನವೈರಸ್ ಸೋಂಕಿತರಿದ್ದ ಎರಡೂ ಕ್ಯಾಬಿನ್‌ಗಳ ವಿವಿಧ ಮೇಲ್ಮೈಗಳಲ್ಲಿ ಕೋವಿಡ್-19 ವೈರಾಣುಗಳ ಆರ್‌ಎನ್‌ಎಯನ್ನು 17 ದಿನಗಳವರೆಗೂ ಪತ್ತೆಹಚ್ಚಲಾಯಿತು’’ ಎಂದು ಸಂಶೋಧಕರು ಹೇಳಿದ್ದಾರೆ.

‘‘ಡೈಮಂಡ್ ಪ್ರಿನ್ಸೆಸ್‌ನಲ್ಲಿ ಕ್ವಾರಂಟೈನ್ ಆರಂಭಗೊಳ್ಳುವ ಮೊದಲು ಪ್ರಯಾಣಿಕರಲ್ಲಿ ಕೊರೋನವೈರಸ್ ಹರಡಿತ್ತು ಹಾಗೂ ಕ್ವಾರಂಟೈನ್ ಬಳಿಕ ಹಡಗಿನ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿತು’’ ಎಂದು ಕೇಂದ್ರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News