ಅಮೆರಿಕದಲ್ಲಿ ಒಂದು ಲಕ್ಷ ದಾಟಿದ ಸೋಂಕು ಪ್ರಕರಣ: ಮೃತರ ಸಂಖ್ಯೆ 1,544

Update: 2020-03-28 19:03 GMT

ವಾಶಿಂಗ್ಟನ್, ಮಾ. 28: ಅಮೆರಿಕದಲ್ಲಿ ಈಗ ಒಂದು ಲಕ್ಷಕ್ಕಿಂತಲೂ ಅಧಿಕ ದೃಢೀಕೃತ ಕೊರೋನವೈರಸ್ ಸೋಂಕು ಪ್ರಕರಣಗಳಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಅಂಶಗಳು ಶುಕ್ರವಾರ ತಿಳಿಸಿವೆ.

ಅಮೆರಿಕದಲ್ಲಿ 1,00,717 ಸೋಂಕು ಪ್ರಕರಣಗಳು ವರದಿಯಾಗಿದ್ದು, 1,544 ಸಾವುಗಳು ಸಂಭವಿಸಿವೆ. ಈ ಪೈಕಿ ಅರ್ಧಕ್ಕೂ ಹೆಚ್ಚು ಸೋಂಕು ಪ್ರಕರಣಗಳು ನ್ಯೂಯಾರ್ಕ್ ಒಂದರಲ್ಲೇ ಸಂಭವಿಸಿವೆ. ಇದರಿಂದಾಗಿ ಅಲ್ಲಿನ ಆರೋಗ್ಯ ವ್ಯವಸ್ಥೆ ಅತಿ ಹೆಚ್ಚಿನ ಒತ್ತಡಕ್ಕೊಳಗಾಗಿದೆ.

ಕೊರೋನವೈರಸ್ ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇಟಲಿ ಇದ್ದರೆ, ಮೂರನೇ ಸ್ಥಾನದಲ್ಲಿ ಚೀನಾ ಇದೆ.

ನ್ಯೂಯಾರ್ಕ್‌ನ ರಸ್ತೆಗಳು ಬಿಕೋ ಎನ್ನುತ್ತಿವೆ. ನ್ಯೂಯಾರ್ಕ್ ನಗರದಲ್ಲಿ ಈವರೆಗೆ 280 ಸಾವುಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News