ಸ್ಪೇನ್‌ನಲ್ಲಿ ಮತ್ತೆ 769 ಸಾವು: ಸಾವಿನ ಸಂಖ್ಯೆಯಲ್ಲಿ ಇಟಲಿ ಬಳಿಕ 2ನೇ ಸ್ಥಾನದಲ್ಲಿ ಸ್ಪೇನ್

Update: 2020-03-28 19:05 GMT

ಮ್ಯಾಡ್ರಿಡ್ (ಸ್ಪೇನ್), ಮಾ. 28: ಸ್ಪೇನ್‌ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 769 ಮಂದಿ ಕೋವಿಡ್-19 ಕಾಯಿಲೆಗೆ ಬಲಿಯಾಗಿದ್ದು, ಇದು ದೇಶದ ಕೊರೋನವೈರಸ್ ಸಾವುಗಳಲ್ಲಿ ಒಂದು ದಿನದ ದಾಖಲೆಯಾಗಿದೆ.

ಇದರೊಂದಿಗೆ ಅಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ 4,858ಕ್ಕೆ ಏರಿದೆ. ಅಲ್ಲಿನ ಒಟ್ಟು ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 64,059ಕ್ಕೆ ಏರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 8,000 ಮಂದಿ ಸೋಂಕಿಗೆ ಈಡಾಗಿದ್ದಾರೆ.

ಕೊರೋನವೈರಸ್ ಸಾವಿನ ಸಂಖ್ಯೆಯಲ್ಲಿ ಇಟಲಿ ಬಳಿಕ ಸ್ಪೇನ್ ಎರಡನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News