ಕೊರೋನ ವೈರಸ್: ಇರಾನ್ ನಲ್ಲಿ 139 ಹೊಸ ಸಾವು

Update: 2020-03-28 19:13 GMT

ಟೆಹರಾನ್, ಮಾ. 28: ಇರಾನ್‌ನಲ್ಲಿ ಶನಿವಾರ 139 ಮಂದಿ ನೂತನ-ಕೊರೋನವೈರಸ್‌ನಿಂದಾಗಿ ಸಾವಿಗೀಡಾಗಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.

ಇದರೊಂದಿಗೆ ದೇಶದಲ್ಲಿ ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಮೃತಪಟ್ಟವರ ಅಧಿಕೃತ ಸಂಖ್ಯೆ 2,517ಕ್ಕೆ ಏರಿದೆ.

ಇದೇ ಅವಧಿಯಲ್ಲಿ 3,076 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 35,408ಕ್ಕೆ ಏರಿದೆ.

ರೊಮೇನಿಯ ರಾಜಧಾನಿ ಬುಕಾರೆಸ್ಟ್‌ನ ರಸ್ತೆಯೊಂದರಲ್ಲಿ ಆರೋಗ್ಯ ಇಲಾಖೆಯ ನೌಕರರೊಬ್ಬರು ಶುಕ್ರವಾರ ಕೊರೋನವೈರಸ್ ನಿಗ್ರಹಕ್ಕಾಗಿ ಸೋಂಕು ನಿರೋಧಕ ದ್ರಾವಣವನ್ನು ಸಿಂಪಡಿಸುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News