ಕೊರೋನ ವೈರಸ್ ಬಗ್ಗೆ ಭಾರತೀಯರು ಯಾಕೆ ಇಷ್ಟೊoದು ಹೆದರಬೇಕು ?

Update: 2020-03-29 13:32 GMT

ಚೀನಾದ ವುಹಾನ್ ನಗರವು 8500 ಚದರ ಕಿಲೋಮೀಟರ್ ವಿಸ್ತಾರದಲ್ಲಿರುವ ಒಂದು ನಗರವಾಗಿದೆ. ಅಲ್ಲಿನ ಜನಸಂಖ್ಯೆಯು 1.1 ಕೋಟಿ ಇದೆ ಹೀಗಾಗಿ ಜನಸಾಂದ್ರತೆ ಅಷ್ಟೊಂದು ಇಲ್ಲ. ಆದರೂ ಕೊರೋನ ವೈರಸ್ ಯಾವ ರೀತಿ ಅಲ್ಲಿ ಪಸರಿಸಿತು ಎಂಬುದನ್ನು ನಾವೆಲ್ಲರೂ ನೋಡಿದೆವು ಮತ್ತು ಅಲ್ಲಿನ ಉತ್ತಮ ವೈದ್ಯಕೀಯ ಸಲಕರಣೆ ಮತ್ತು  ಸೇವೆಗಳಿಂದಾಗಿ ಅದು ಅಲ್ಲಿ ಬೇಗ ಗುಣಮುಖವಾಯಿತು  ಹಾಗೂ ಚೀನಾದ ಇನ್ನಿತರ ನಗರಗಳಿಗೆ ಅದು ಪಸರಿಸದ ಹಾಗೆ ನೋಡಿಕೊಂಡಿತು.

ಆದರೆ ನಮ್ಮ ಬೆಂಗಳೂರಿಗೆ ಹೋಲಿಸಿದರೆ ನಗರವು ಕೇವಲ 700 ಚದರ ಕಿಲೋಮೀಟರ್ ವಿಸ್ತೀರ್ಣವಿರುವುದು ಆದರೆ ಜನ ಸಂಖ್ಯೆಯು 1.3 ಕೋಟಿ ಇದೆ ಈಗ ನೀವೇ ಊಹಿಸಿ ಇಲ್ಲಿನ ಜನಸಾಂದ್ರತೆ ಎಷ್ಟಿರಬಹುದೆಂದು. ಇಲ್ಲಿ ಎಷ್ಟರ ಮಟ್ಟಿಗೆ ಸಾಮಾಜಿಕ ಅಂತರ ಕಾಪಾಡಬಹುದು ಹಾಗೂ ರೋಗ ಎಷ್ಟು ವೇಗವಾಗಿ ಹರಡಬಹುದೆಂದು. ಇನ್ನೂ ಹಲವು ಮೆಗಾ ಸಿಟಿಯನ್ನೊಳಗೊಂಡ ದೇಶವಾಗಿದೆ ಭಾರತ. ಮುಂಬೈಯ ವಿಸ್ತೀರ್ಣ ಕೇವಲ 600 ಚದರ ಕಿ.ಮಿ. ಆದರೆ ಜನಸಂಖ್ಯೆ 2.3 ಕೋಟಿ ಇದೆ.

ಚೀನಾದ ಬೀಜಿಂಗ್ ನಲ್ಲಿ ಹೆಚ್ಚು ಕಮ್ಮಿ ಇಷ್ಟೇ ಮಂದಿ ವಾಸಿಸುತ್ತಿದ್ದಾರೆ. ಆದರೆ ಅಲ್ಲಿನ ವಿಸ್ತೀರ್ಣವು 12,250 ಚದರ ಕಿ.ಮೀಟರ್ ನಲ್ಲಿದೆ. ಅಂದರೆ 11,650 ಚದರ ಕಿ.ಮೀಟರ್ ಮುಂಬೈಗಿಂತ ಹೆಚ್ಚು. ಇದು ಭಾರತವು ಇಷ್ಟೊ೦ದು ಭೀತಿಗೊಳಗಾಗಳು ಕಾರಣ.

ಸರಕಾರವು ಎಷ್ಟೇ ವಿನಂತಿಸಿದರೂ ಇನ್ನೂ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಕಾರಣ ಇದನ್ನು ಇಲ್ಲಿನ ಜನತೆ ತುಂಬಾ ಲಘುವಾಗಿ ಪರಿಗಣಿಸಿದ್ದಾರೆ. ಇದರಲ್ಲಿ ನಮ್ಮ ಜವಾಬ್ದಾರಿಯು ತುಂಬಾ ಇದೆ. ನಾವು ಅತ್ಯಾವಶ್ಯಕ ಇದ್ದರೆ ಮಾತ್ರ ಮುಂಜಾಗ್ರತೆಯೊಂದಿಗೆ ಹೊರ ಹೋಗಬೇಕು ಹಾಗೂ ಆದಷ್ಟು ಬೇಗ ಹಿಂದಿರುಗಬೇಕು ಮತ್ತು ಕೂಡಲೇ ಚೆನ್ನಾಗಿ ಕೈ ತೊಳೆಯಬೇಕು ( ಕೊರೋನ ವೈರಸ್ ಸಾಬೂನಿನ ಶಕ್ತಿಗೆ ಸತ್ತು ಹೋಗುತ್ತದೆ ಎಂಬುವುದು WHO ಹೇಳಿಕೆ) ಸಾಧ್ಯವಿದ್ದರೆ ಸ್ನಾನ ಮಾಡಿದರೆ ಒಳ್ಳೆಯದು. ಈ ರೀತಿ ಮುಂಜಾಗ್ರತೆ ವಹಿಸಿದರೆ ಮಾತ್ರ ಮುಂದೆ ಆಗಬಹುದಾದ ಬಹಳ ದೊಡ್ಡ ಅನಾಹುತದಿಂದ ನಮ್ಮೆಲ್ಲರನ್ನೂ ರಕ್ಷಿಸಬಹುದು.

Writer - ಹಸನ್ ಪಿಲಾರ್

contributor

Editor - ಹಸನ್ ಪಿಲಾರ್

contributor

Similar News