ಚೀನಾದಲ್ಲಿ 2ನೇ ಸುತ್ತಿನ ಕೊರೋನವೈರಸ್ ಸ್ಫೋಟ?

Update: 2020-03-30 14:54 GMT

ಬೀಜಿಂಗ್, ಮಾ. 30: ಚೀನಾದಲ್ಲಿ ಸ್ಥಳೀಯ ವ್ಯಕ್ತಿಗಳು ಕೊರೋನವೈರಸ್ ಸೋಂಕಿಗೆ ಒಳಗಾಗುವುದು ನಿಂತಿದ್ದರೂ, ವಿದೇಶಗಳಿಂದ ಬಂದವರ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ಆ ದೇಶಕ್ಕೆ ಚಿಂತೆಯ ವಿಷಯವಾಗಿದೆ. ಇದು ಎರಡನೇ ಸುತ್ತಿನ ಕೊರೋನವೈರಸ್ ಸಾಂಕ್ರಾಮಿಕ ಸ್ಫೋಟಕ್ಕೆ ಕಾರಣವಾಗಬಹುದೇ ಎಂಬ ಭೀತಿಯನ್ನು ಹುಟ್ಟಿಸಿದೆ.

ದೇಶದಲ್ಲಿ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಿರುವುದು ಕೂಡ ಸೋಂಕು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಭೀತಿಯನ್ನು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.

ಚೀನಾದಲ್ಲಿರುವ ವಿದೇಶಿಯರ ಪೈಕಿ 693 ಮಂದಿ ನೂತನ-ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ. ‘‘ಹಾಗಾಗಿ, ಎರಡನೇ ಸುತ್ತಿನ ಕೊರೋನವೈರಸ್ ಸೋಂಕಿನ ಪ್ರಮಾಣ ಸಾಕಷ್ಟು ದೊಡ್ಡದಾಗಿಯೇ ಇದೆ’’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ)ದ ವಕ್ತಾರ ಮಿ ಫೆಂಗ್ ತಿಳಿಸಿದರು.

ಚೀನಾದಲ್ಲಿ ಈವರೆಗೆ ನೂತನ-ಕೊರೋನವೈರಸ್‌ಗೆ 3,300ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಆ ದೇಶದಲ್ಲಿ ಒಟ್ಟು 81,439 ಸೋಂಕು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News