ಕ್ವಾರಂಟೈನ್ ಬೇಡ ಎಂದು ಜನರಿಗೆ ಕರೆ ನೀಡಿದ ಬ್ರೆಝಿಲ್ ಅಧ್ಯಕ್ಷ

Update: 2020-03-30 15:34 GMT

ಸಾವೊ ಪೌಲೊ (ಬ್ರೆಝಿಲ್), ಮಾ. 30: ನೋವೆಲ್-ಕೊರೋನವೈರಸ್ ಹರಡುವುದನ್ನು ತಡೆಯುವ ಉದ್ದೇಶದ ಕ್ವಾರಂಟೈನ್ ಕ್ರಮಗಳನ್ನು ಪ್ರಶ್ನಿಸಿ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಮಾಡಿರುವ ಎರಡು ಟ್ವೀಟ್‌ಗಳನ್ನು ಟ್ವಿಟರ್ ರವಿವಾರ ಅಳಿಸಿಹಾಕಿದೆ. ಇದು ಟ್ವಿಟರ್‌ನ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅದು ತಿಳಿಸಿದೆ.

ಸ್ವತಃ ತನ್ನದೇ ಸರಕಾರದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ತೀವ್ರ ಬಲಪಂಥೀಯ ನಾಯಕ ಬೊಲ್ಸೊನಾರೊ ಇತ್ತೀಚೆಗೆ ಬ್ರೆಸೀಲಿಯದ ರಸ್ತೆಗಳಲ್ಲಿ ತನ್ನ ಬೆಂಬಲಿಗರೊಂದಿಗೆ ಬೆರೆತಿದ್ದರು ಹಾಗೂ ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಅವರನ್ನು ಒತ್ತಾಯಿಸಿದ್ದರು. ಇದಕ್ಕೆ ಸಂಬಂಧಿಸಿದ ಎರಡು ವೀಡಿಯೊಗಳನ್ನು ಅವರು ಟ್ವಿಟರ್‌ನಲ್ಲಿ ಹಾಕಿದ್ದರು.

ಆ ಎರಡು ವೀಡಿಯೊಗಳನ್ನು ಅಳಿಸಿಹಾಕಲಾಗಿದೆ ಹಾಗೂ ಯಾಕೆ ಹಾಗೆ ಮಾಡಲಾಗಿದೆ ಎಂಬ ವಿವರಣೆಯನ್ನು ಒಳಗೊಂಡ ನೋಟಿಸ್‌ಗಳನ್ನು ಅಲ್ಲಿ ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News