'ಹೊರ ಹೋಗಿ ತಿನ್ನಿ, ಶಾಪಿಂಗ್ ಮಾಡಿ': ಜನರಿಗೆ ಚೀನಾ ಸರಕಾರದ ಕರೆ

Update: 2020-03-31 11:40 GMT

ಬೀಜಿಂಗ್: ಕೊರೋನ ವೈರಸ್‍ ನಿಂದಾಗಿ ತಿಂಗಳುಗಟ್ಟಲೆ ಲಾಕ್‍ ಡೌನ್‍ ನಲ್ಲಿದ್ದ ಚೀನಾದಲ್ಲಿ ಈಗ ಜನರು ರಿಲ್ಯಾಕ್ಸ್ ಆಗಿ, ಮನೆಗಳಿಂದ ಹೊರ ಹೋಗಿ ಊಟ ಮಾಡಬೇಕು ಹಾಗೂ ಶಾಪಿಂಗ್ ಮಾಡಬೇಕೆಂಬ ಸಂದೇಶ ಅಲ್ಲಿನ ಸರಕಾರದಿಂದ ರವಾನೆಯಾಗಿದೆ.

ದೇಶೀಯವಾಗಿ ಕಡಿಮೆಯಾಗಿರುವ ವಿವಿಧ ಉತ್ಪನ್ನಗಳ ಬಳಕೆ ಪ್ರಮಾಣವನ್ನು ಏರಿಸಲು ಸರಕಾರ ಈ ಕ್ರಮ ಕೈಗೊಂಡಿದೆ. ಹಲವೆಡೆ ಜನರಿಗೆ ವೋಚರ್‍ ಗಳನ್ನೂ ವಿತರಿಸಲಾಗುತ್ತಿದ್ದು, ಕೆಲವೆಡೆ ಕಾರು ಮುಂತಾದ ವಸ್ತುಗಳ ಖರೀದಿಗೆ ಸಬ್ಸಿಡಿಗಳನ್ನೂ ಒದಗಿಸಲಾಗುತ್ತಿದೆ. ಅಧಿಕಾರಿಗಳು ಹೇಗೆ ತಮಗೆ ನೀಡಲಾದ ವಿರಾಮದ ವೇಳೆ ಹೊರ ಹೋಗಿ ರುಚಿರುಚಿಯಾದ ತಿಂಡಿಗಳನ್ನು ಸವಿಯುತ್ತಿದ್ದಾರೆಂಬ ಕುರಿತಾದ ಬರಹಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.

ಝೀಜಿಯಾಂಗ್‍ನಲ್ಲಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಅರ್ಧ ದಿನ ವೇತನ ಸಹಿತ ರಜೆ ನೀಡುತ್ತಿದ್ದು ಉದ್ಯೋಗಿಗಳಿಗೆ ಹೊರ ಹೋಗಿ ಶಾಪಿಂಗ್ ಮಾಡಲು ಹುರಿದುಂಬಿಸುತ್ತಿವೆ.

ಇಲೆಕ್ಟ್ರಾನಿಕ್ಸ್ ಖರೀದಿ ಹಾಗೂ ಕ್ರೀಡಾ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಜನರು ಭಾಗವಹಿಸುವಂತಾಗಲು  ಸರಕಾರ ಈಗಾಗಲೇ 45 ಮಿಲಿಯನ್ ಡಾಲರ್ ಮೌಲ್ಯದ ವೋಚರ್‍ ಗಳನ್ನು ಬಿಡುಗಡೆಗೊಳಿಸಿದೆ.

ಗ್ರಾಹಕೋತ್ಪನ್ನಗಳ ಮೇಲೆ ಅತ್ಯಧಿಕ ಖರ್ಚು ಮಾಡುವ ದೇಶವೆಂಬ ಹೆಗ್ಗಳಿಕೆ ಪಡೆದಿದ್ದ ಚೀನಾದಲ್ಲಿ ಈ ವರ್ಷದ ಮೊದಲೆರಡು ತಿಂಗಳುಗಳಲ್ಲಿ ರಿಟೇಲ್ ಸೇಲ್ಸ್ ಶೇ 20.5ರಷ್ಟು ಕುಸಿತ ಕಂಡಿತ್ತು. ಇದು ಮತ್ತೆ ಹಿಂದಿನಂತಾಗಲು ಈಗ ಸರಕಾರ ಅವಿರತ ಶ್ರಮಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News