ದುಬೈ: ಬೀಗಮುದ್ರೆಯ ನಡುವೆ ಜನರ ಹಸಿವನ್ನು ನಿವಾರಿಸುತ್ತಿರುವ ಭಾರತೀಯ

Update: 2020-03-31 16:00 GMT

ದುಬೈ, ಮಾ. 31: ನೋವೆಲ್-ಕೊರೋನವೈರಸ್ ಹರಡುವಿಕೆಯನ್ನು ತಡೆಯಲು ಯುಎಇಯಲ್ಲಿ ದೇಶವ್ಯಾಪಿ ಬೀಗಮುದ್ರೆ ಚಾಲ್ತಿಯಲ್ಲಿರುವ ಸಮಯದಲ್ಲಿ, ದುಬೈಯಲ್ಲಿರುವ ಭಾರತೀಯರೊಬ್ಬರು ಅಲ್ಲಿ ಅಗತ್ಯವಿರುವವರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ ಹಾಗೂ ಆ ಮೂಲಕ ಜನರು ಮನೆಗಳಿಂದ ಹೊರಬಾರದಂತೆ ನೋಡಿಕೊಳ್ಳುತ್ತಿದ್ದಾರೆ.

 ದುಬೈಯನ್ನು ಒಳಗೊಂಡ ಯುಎಇಯಲ್ಲಿ ಕೊರೋನವೈರಸ್ ಸೋಂಕಿನ 570 ಪ್ರಕರಣಗಳು ಮತ್ತು ಮೂರು ಸಾವುಗಳು ವರದಿಯಾಗಿವೆ. ಯುಎಇಯು ರಾಷ್ಟ್ರವ್ಯಾಪಿ ಲಾಕ್‌ಡೌನನ್ನು ಎಪ್ರಿಲ್ 5ರವರೆಗೆ ವಿಸ್ತರಿಸಲಾಗಿದೆ. ಮನೆಗಳಿಗೆ ಆಹಾರ ವಸ್ತುಗಳ ಪೂರೈಕೆಯನ್ನು ಬೀಗಮುದ್ರೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಇಂಥ ಅಭೂತಪೂರ್ವ ಸಮಯ ಬರುತ್ತದೆ ಎಂದು ನಾನು ಎಂದೂ ಯೋಚಿಸಿರಲಿಲ್ಲ ಎಂದು ದುಬೈಯಲ್ಲಿ 15 ವರ್ಷಗಳಿಂದ ವಿತರಣೆ ಕೆಲಸದಲ್ಲಿ ತೊಡಗಿರುವ ಮುರಳಿ ಶಂಬಂದಮ್ ಹೇಳುತ್ತಾರೆ. ನಾಲ್ವರು ಸದಸ್ಯರನ್ನೊಳಗೊಂಡ ಅವರ ಕುಟುಂಬ ತಮಿಳುನಾಡಿನ ಅರಿಯಲೂರು ಪಟ್ಟಣದಲ್ಲಿದೆ.

ಲಾಕ್‌ಡೌನ್ ಹೊರತಾಗಿಯೂ ಅವರು ಆಹಾರ ಪದಾರ್ಥಗಳನ್ನು ಪೂರೈಸುವ ತನ್ನ ಕೆಲಸವನ್ನು ಮುಂದುವರಿಸಿದ್ದಾರೆ.

‘‘ಈ ಕೆಲಸವನ್ನು ಯಾರಾದರೂ ಮಾಡಲೇಬೇಕಾಗಿದೆ. ಆಹಾರವು ಅವಶ್ಯಕ ವಸ್ತುವಾಗಿದೆ. ಯಾರನ್ನಾದರೂ ಆಹಾರದಿಂದ ವಂಚಿರನ್ನಾಗಿಸಲು ಹೇಗೆ ಸಾಧ್ಯ? ನಾವು ಹೊರಬರದಿದ್ದರೆ ಮನೆಯಲ್ಲಿ ಅಡುಗೆ ಸೌಲಭ್ಯವಿಲ್ಲದಿರುವವರು ಏನು ತಿನ್ನುತ್ತಾರೆ?’’ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News