ಅಮೆರಿಕನ್ನರನ್ನು ವಾಪಸ್ ಕರೆತರಲು ಭಾರತದೊಂದಿಗೆ ಸಮನ್ವಯ

Update: 2020-03-31 14:49 GMT

ವಾಶಿಂಗ್ಟನ್, ಮಾ. 31: ದೇಶವ್ಯಾಪಿ ಬೀಗಮುದ್ರೆಯ ಹಿನ್ನೆಲೆಯಲ್ಲಿ, ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಅಮೆರಿಕನ್ ಪ್ರಜೆಗಳನ್ನು ತೆರವುಗೊಳಿಸುವ ವಿಷಯದಲ್ಲಿ ಅಮೆರಿಕದ ಅಧಿಕಾರಿಗಳು ಭಾರತ ಸರಕಾರದೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಅಮೆರಿಕದ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕವು ಈಗಾಗಲೇ 50 ದೇಶಗಳಿಂದ ತನ್ನ ಸುಮಾರು 25,000 ನಾಗರಿಕರನ್ನು ವಾಪಸ್ ಕರೆದುಕೊಂಡು ಬಂದಿದೆ ಹಾಗೂ ಮಾರಕ ಕೊರೋನವೈರಸ್ ಸಾಂಕ್ರಾಮಿಕ ವಿಶ್ವವನ್ನು ಆವರಿಸಿರುವ ಹೊತ್ತಿನಲ್ಲಿ ಅಮೆರಿಕಕ್ಕೆ ಮರಳುವ ಇಚ್ಛೆಯನ್ನು ಇನ್ನೂ 9,000 ಮಂದಿ ವ್ಯಕ್ತಪಡಿಸಿದ್ದಾರೆ ಎಂದು ಕೌನ್ಸುಲರ್ ವ್ಯವಹಾರಗಳಿಗಾಗಿನ ಅಮೆರಿಕದ ಪ್ರಧಾನ ಉಪ ಸಹಾಯಕ ವಿದೇಶ ಕಾರ್ಯದರ್ಶಿ ಇಯಾನ್ ಬ್ರೌನ್‌ಲೀ ಸೋಮವಾರ ನಡೆಸಿದ ಟೆಲಿಕಾನ್ಫರೆನ್ಸ್‌ನಲ್ಲಿ ತಿಳಿಸಿದರು.

‘‘ಮುಂದಿನ ವಾರ ನಾವು 100 ಹೆಚ್ಚುವರಿ ವಿಮಾನಗಳನ್ನು ನಿಯೋಜಿಸುತ್ತೇವೆ. ಹಾಗೂ ತವರಿಗೆ ಮರಳಲು ಇಚ್ಛೆ ವ್ಯಕ್ತಪಡಿಸಿರುವ ಸುಮಾರು 9,000 ಅಮೆರಿಕ ನಾಗರಿಕರನ್ನು ನಾವು ಗುರುತಿಸಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News