ಬ್ರಿಟನ್: ಕೊರೊನ ಪೀಡಿತರಿಗೆ ಚಿಕಿತ್ಸೆ ನೀಡಿ ಅದೇ ಸೋಂಕಿಗೆ ಬಲಿಯಾದ ಮೂವರು ವೈದ್ಯರು

Update: 2020-03-31 15:22 GMT

ಬ್ರಿಟನ್, ಮಾ. 31 : ಇಂಗ್ಲೆಂಡ್ ನಲ್ಲಿ ಕೊರೊನ ಹಾವಳಿ ವ್ಯಾಪಕವಾಗಿರುವಂತೆಯೇ ಅಲ್ಲಿ ಕೊರೊನ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ಮೂವರು ವೈದ್ಯರು ಸೋಂಕಿಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುವ ದುಃಖದ ಸುದ್ದಿ ಬಂದಿದೆ. 

ಡಾ. ಹಬೀಬ್ ಝೈದಿ, ಡಾ. ಆದಿಲ್ ಅಲ್ ತಯರ್ , ಡಾ. ಅಮ್ಜದ್ ಅಲ್ ಹವ್ರಾನಿ ಅವರು ಕೊರೊನ ಪೀಡಿತರಿಗೆ ಚಿಕಿತ್ಸೆ ನೀಡುತ್ತಾ ಅದೇ ಸೋಂಕಿಗೆ ಬಲಿಯಾದ ಮೊದಲ ಮೂವರು ವೈದ್ಯರು ಎಂದು ತಿಳಿದು ಬಂದಿದೆ.  ಈ ಮೂವರೂ ಆಫ್ರಿಕಾ ಮತ್ತು ಏಷ್ಯಾ ಮೂಲದವರು. 

ಈ ಮೂವರು ವೈದ್ಯರ ಮಹಾ ತ್ಯಾಗದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಗಣ್ಯಾತಿಗಣ್ಯರು ಇವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

ಹ್ಯಾರಿ ಪಾಟರ್ ಖ್ಯಾತಿಯ ಲೇಖಕಿ ಜೆ ಕೆ ರೌಲಿಂಗ್ ಈ ಮೂವರು ಹುತಾತ್ಮ ವೈದ್ಯರ  ಕುರಿತ ಟ್ವೀಟ್ ಅನ್ನು ರಿಟ್ವೀಟ್  ಮಾಡಿ ವಲಸಿಗರು, ಅವರ ಮಕ್ಕಳು, ಮೊಮ್ಮಕ್ಕಳು ಈ ದೇಶಕ್ಕಾಗಿ ಮತ್ತು ಇಲ್ಲಿನ ಅರೋಗ್ಯ ವ್ಯವಸ್ಥೆಗೆ ಇಂತಹ ಮಹಾನ್ ಕೊಡುಗೆ ನೀಡಿದ್ದಾರೆ  ಎಂಬುದನ್ನು ಈ ದೇಶ ಎಂದೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News