ಅಮೆರಿಕ: 3,000 ದಾಟಿದ ಸಾವಿನ ಸಂಖ್ಯೆ

Update: 2020-03-31 16:04 GMT

ವಾಶಿಂಗ್ಟನ್, ಮಾ. 31: ಅಮೆರಿಕದಲ್ಲಿ ನೂತನ-ಕೊರೋನವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಸೋಮವಾರ 3,017ಕ್ಕೆ ಏರಿದೆ. ಅಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕನಿಷ್ಠ 540 ಸಾವುಗಳು ವರದಿಯಾಗಿವೆ.

ಅದೇ ವೇಳೆ, ಅಲ್ಲಿನ ಸೋಂಕಿತರ ಸಂಖ್ಯೆಯು 1,63,429ಕ್ಕೆ ಏರಿದೆ.

ಅಮೆರಿಕದಲ್ಲಿ ನ್ಯೂಯಾರ್ಕ್ ರಾಜ್ಯವು ಕೊರೋನವೈರಸ್ ಸಾಂಕ್ರಾಮಿಕದ ಕೇಂದ್ರ ಬಿಂದುವಾಗಿದೆ. ಅಲ್ಲಿನ ಆಸ್ಪತ್ರೆಗಳು ಈ ರೋಗವನ್ನು ಎದುರಿಸಲು ಸನ್ನದ್ಧವಾಗಿರಲಿಲ್ಲ. ಅಲ್ಲಿ ಮುಖಕವಚಗಳು, ರಕ್ಷಣಾ ದಿರಿಸುಗಳು ಹಾಗೂ ರೆಸ್ಪಿರೇಟರ್ ಮುಂತಾದ ಜೀವರಕ್ಷಕ ಸಲಕರಣೆಗಳ ಕೊರತೆ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News