ಚೀನಾ: ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ

Update: 2020-03-31 16:16 GMT

ಬೀಜಿಂಗ್, ಮಾ. 31: ಚೀನಾದಲ್ಲಿ ಸೋಮವಾರ ಹೊಸದಾಗಿ ದೃಢಪಟ್ಟ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ವಿದೇಶಗಳಿಂದ ಬಂದಿರುವವರು ಸೋಂಕಿಗೀಡಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಈ ಹೆಚ್ಚಳವಾಗಿದೆ.

ದೇಶದಲ್ಲಿ ಒಟ್ಟು 48 ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ನ್ಯಾಶನಲ್ ಹೆಲ್ತ್ ಕಮಿಶನ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಹಿಂದಿನ ದಿನ 31 ಸೋಂಕು ಪ್ರಕರಣಗಳು ವರದಿಯಾಗಿದ್ದವು.

ಸೋಮವಾರ ಸ್ಥಳೀಯರು ಸೋಂಕಿಗೊಳಗಾಗಿರುವ ಪ್ರಕರಣಗಳು ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News