ಹೊಟೇಲ್ ಉದ್ಯಮಿ ಸುಧಾಕರ ಶೆಟ್ಟಿ ನಿಧನ

Update: 2020-03-31 17:41 GMT

 ಶಿರ್ವ, ಮಾ.31: ಪುಣೆಯ ಹೊಟೇಲ್ ಉದ್ಯಮಿ, ಬಂಟಕಲ್ಲು ಸಮೀಪದ ಪಂಜಿಮಾರು ಮಾಣಾಯಿ ದೊಡ್ಡಮನೆ ಸುಧಾಕರ ಎನ್.ಶೆಟ್ಟಿ(68) ಮಾ.28 ರಂದು ಪುಣೆಯ ಸ್ವಗೃಹದಲ್ಲಿ ನಿಧನರಾದರು.

ಪುಣೆ ಜಿಲ್ಲೆಯ ಪುಣೆ-ಸತಾರಾ ರೋಡ್ ಬೋರ್ ತಾಲೂಕಿನ ನಗರಪಾಲಿಕೆ ಸದಸ್ಯರಾಗಿದ್ದ ಇವರು, ತಾಲೂಕು ಸ್ಪೇಶಲ್ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಆಗಿಯೂ ಸೇವೆ ಸಲ್ಲಿಸಿದ್ದರು. ಅಪ್ಪಟ ಕಾಂಗ್ರೆಸ್ಸಿಗರಾಗಿದ್ದ ಅವರು ಬೋರ್ ತಾಲೂಕಿನ ಕಾಂಗ್ರೆಸ್ ಅಧ್ಯಕ್ಷರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News