ಎಚ್‌ಆರ್‌ಎಸ್‌ನಿಂದ ಊಟ, ಆಹಾರ ಕಿಟ್ ವಿತರಣೆ

Update: 2020-03-31 17:42 GMT

ಉಡುಪಿ, ಮಾ.31: ಜಮಾಅತೆ ಇಸ್ಲಾಮೀ ಹಿಂದ್ ಇದರ ಅದೀನ ಸಂಸ್ಥೆ ಯಾಗಿರುವ ಹ್ಯೂಮಾನಿಟಿರಿಯನ್ ರಿಲೀಫ್ ಸೊಸೈಟಿ ಉಡುಪಿ ಜಿಲ್ಲೆಯ ವತಿಯಿಂದ ಲಾಕ್‌ಡೌನ್ ದಿನದಿಂದ ಈವರೆಗೆ ಸಾವಿರಾರು ಮಂದಿಗೆ ಊಟ ಹಾಗೂ ಬಡ ಕುಟುಂಬಗಳಿಗೆ ಎಲ್ಲಾ ಅಗತ್ಯವಿರುವ ಸಾಮಾಗ್ರಿಗಳ 400 ಕಿಟ್ ಗಳನ್ನು ವಿತರಿಸಿದೆ.

ಅದೇ ರೀತಿ ವಿವಿಧ ಕಡೆಗಳಲ್ಲಿ ಅಗತ್ಯವಿರುವ ಹಲವಾರು ಮಂದಿಗೆ ಔಷಧಿ ಗಳನ್ನು ಮುಟ್ಟಿಸುವ ಕಾರ್ಯವನ್ನು ಸಂಸ್ಥೆ ಮಾಡಿದೆ. ಈ ಮಹಾತ್ಕಾರ್ಯಕ್ಕೆ ದಾನಿಗಳು ಉತ್ತಮವಾಗಿ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಈ ಕೆಲಸ ಸಮರೋಪಾದಿಯಲ್ಲಿ ನಡೆಯಲಿದೆ. ಸಮಾಜದಲ್ಲಿ ಯಾವುದೇ ವ್ಯಕ್ತಿಯು ಹಸಿವು ಹಾಗೂ ಆರೋಗ್ಯ ಸಮಸ್ಯೆಯನ್ನು ಎದುರಿಸಬಾರದೆಂಬ ಎಂಬುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾ ಸಂಚಾಲಕ ಹಸನ್ ಕೋಡಿ ಬೆಂಗ್ರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News