ಕಾಶ್ಮೀರಿಗಳಿಗೆ ಕೆಳದರ್ಜೆಯ ಉದ್ಯೋಗದಲ್ಲಿ ಮಾತ್ರ ಮೀಸಲಾತಿ: ಕೇಂದ್ರದ ಹೊಸ ನೀತಿಗೆ ವ್ಯಾಪಕ ವಿರೋಧ

Update: 2020-04-01 13:52 GMT

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂಬಂಧ ಕೇಂದ್ರ ಸರ್ಕಾರ ವಿವಾದಾತ್ಮಕ ಹೊಸ ನೇಮಕಾತಿ ಕಾನೂನಿನ ಅಧಿಸೂಚನೆ ಹೊರಡಿಸಿದೆ. ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಿದ ಎಂಟು ತಿಂಗಳ ಬಳಿಕ ಈ ಅಧಿಸೂಚನೆ ಪ್ರಕಟವಾಗಿದೆ.

ಈ ನಿಯಮಾವಳಿ ಪ್ರಕಾರ, ಕೆಳ ಹಂತದ ಹುದ್ದೆಗಳಲ್ಲಿ ಅಂದರೆ ಕಿರಿಯ ಸಹಾಯಕ, ಜವಾನ ಮತ್ತಿತರರ ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಲಾಗಿದ್ದು, ಉಳಿದ ಹುದ್ದೆಗಳು ಇಡೀ ದೇಶಕ್ಕೆ ಮುಕ್ತವಾಗಿರುತ್ತವೆ. ಈ ಮೊದಲು ಎಲ್ಲ ಉದ್ಯೋಗ ಮತ್ತು ಭೂ ಮಾಲಕತ್ವ ಸ್ಥಳೀಯರಿಗೇ ಮೀಸಲಾಗಿತ್ತು.

"ಕೇಂದ್ರದ ಈ ನಿಯಮಾವಳಿ ಸ್ಥಳೀಯರಿಗೆ ಮಾಡಿದ ಅವಮಾನ”ಎಂದು ನ್ಯಾಷನಲ್‍ ಕಾನ್ಫರೆನ್ಸ್ ಮುಖ್ಯಸ್ಥ ಉಮರ್‍ ಅಬ್ದುಲ್ಲಾ ಕಿಡಿಕಾರಿದ್ದಾರೆ. ಇಡೀ ಭಾರತ ಕೊರೋನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಈ ನಿಯಮ ಜಾರಿಗೊಳಿಸಿದ ಔಚಿತ್ಯವನ್ನೂ ಅವರು ಪ್ರಶ್ನಿಸಿದ್ದಾರೆ. ಎಂಟು ತಿಂಗಳ ಬಂಧನದಿಂದ ಇತ್ತೀಚೆಗಷ್ಟೇ ಉಮರ್ ಬಿಡುಗಡೆಯಾಗಿದ್ದರು.

ಈ ಹೊಸ ಕಾನೂನು ಇಲ್ಲಿನ ಮೂಲ ನಿವಾಸಿಗಳಿಗೆ ಯಾವ ಬಗೆಯ ರಕ್ಷಣೆಯನ್ನೂ ನೀಡುವುದಿಲ್ಲ. ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಅಧಿಸೂಚನೆ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News