ಉ.ಪ್ರದೇಶದಲ್ಲಿ ಕೊರೋನಗೆ ಮೊದಲ ಬಲಿ: 25 ವರ್ಷದ ಯುವಕ ಸೋಂಕಿನಿಂದ ಮೃತ್ಯು

Update: 2020-04-01 16:30 GMT

ಹೊಸದಿಲ್ಲಿ, ಎ.1: ಉತ್ತರಪ್ರದೇಶದಲ್ಲಿಯೂ ಕೊರೋನ ವೈರಸ್ ‌ಮರಣ ಮೃದಂಗ ಬಾರಿಸಿದ್ದು, 25 ವರ್ಷದ ಯುವಕನೊಬ್ಬ ಮಂಗಳವಾರ ಈ ಮಾರಕ ಸೋಂಕಿನಿಂದ ಸಾವನ್ನಪ್ಪಿದ್ದಾನೆ. ದೇಶದಲ್ಲಿ ಕೊರೋನಗೆ ಬಲಿಯಾದವರಲ್ಲಿ ಈತ ಅತ್ಯಂತ ಕಿರಿಯ ವಯಸ್ಸಿನವನಾಗಿದ್ದಾನೆ.

 ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಯುವಕನನ್ನು ಗೋರಖ್‌ಪುರ ಸಮೀಪದ ಬಸ್ತಿ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕ ಮುಂಬೈಗೆ ಪ್ರಯಾಣಿಸಿದ್ದನೆಂಬುದನ್ನು ಆತ ಹಾಗೂ ಆತನ ಕುಟುಂಬಿಕರು ಮುಚ್ಚಿಟ್ಟಿದ್ದರು. ಇದರಿಂದಾಗಿ ಆತ ಕೋವಿಡ್-19 ಪೀಡಿತನಾಗಿರಬಹುದೆಂಬ ಸಂಶಯ ಬಾರದೆ ವೈದ್ಯರು ಆತನನ್ನು ಆಸ್ಪತ್ರೆಯ ಜನರಲ್‌ ವಾರ್ಡ್‌ಗೆ ದಾಖಲಿಸಿದ್ದರು.

ಕೊರೋನ ಪೀಡಿತನಾಗಿದ್ದ ಯುವಕನನ್ನು ಜನರಲ್ ವಾರ್ಡ್‌ಗೆ ದಾಖಲಿಸಿದರಿಂದಾಗಿ, ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಪಂದಿಗೂ ಕೊರೋನ ವೈರಸ್ ಸೋಂಕು ಹರಡಿರುವ ಅಪಾಯವಿದೆಯೆಂದು ಅಧಿಕಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ. ರೋಗಿಯ ಪ್ರಯಾಣ ಇತಿಹಾಸವನ್ನು ಆತ ಹಾಗೂ ಆತನ ಕುಟುಂಬಿಕರು ಮುಚ್ಟಿಟ್ಟಿದ್ದುದು ಅವರಿಂದಾದ ಲೋಪವಾಗಿದೆ. ಆತ ತಾನು ಒಂದು ತಿಂಗಳಿನಿಂದ ಅಸ್ವಸ್ಥನಾಗಿದ್ದು, ಆ ಸಮಯದಲ್ಲಿ ತನಗೆ ಜ್ವರ ಇರಲಿಲ್ಲವೆಂದು ಎಂದು ಆತ ತಿಳಿಸಿದ್ದ. ಹೀಗಾಗಿ ಆತನನ್ನು ಹೊರರೋಗಿಗಳ ವಿಭಾಗದಲ್ಲಿ ವೈದ್ಯಕೀಯ ತಪಾಸಣೆ ಗೊಳಪಡಿಸಲಾಯಿತು ಹಾಗೂ ಆನಂತರ ಜನರಲ್ ವಾರ್ಡ್‌ಗೆ ದಾಖಲಿಸ ಲಾಯಿತೆಂದು ಆಸ್ಪತ್ರೆಯ ವೈದ್ಯ ಡಾ. ಒ.ಪಿ.ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News