'ಅವುಗಳನ್ನು ಯುವ ರೋಗಿಗಳಿಗೆ ನೀಡಿ': ವೆಂಟಿಲೇಟರ್ ನಿರಾಕರಿಸಿ ಕೊನೆಯುಸಿರೆಳೆದ 90 ವರ್ಷದ ವೃದ್ಧೆ

Update: 2020-04-01 16:52 GMT

'ವೆಂಟಿಲೇಟರ್ ಗಳನ್ನು ಯುವಜನತೆಗೆ ನೀಡಿ' ಎಂದು ವೆಂಟಿಲೇಟರ್ ನಿರಾಕರಿಸಿದ 90 ವರ್ಷದ ಕೊರೋನವೈರಸ್ ಪೀಡಿತ ವೃದ್ಧೆಯೊಬ್ಬರು ಕೊನೆಯುಸಿರೆಳೆದಿದ್ದಾರೆ.

ಬೆಲ್ಜಿಯಂನ ಬಿಂಕೋಂನ ಸುಝಾನ್ ಹೊಯ್ಲೇರ್ಟ್ಸ್ ಮಾರ್ಚ್ 20ರಂದು ಕೊರೋನ ವೈರಸ್ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಪರಿಸ್ಥಿತಿ ಆ ವೇಳೆಗಾಗಲೇ ಗಂಭೀರವಾಗಿತ್ತು.

ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಅವರಿಗೆ ಕೊರೋನವೈರಸ್ ಇರುವುದು ದೃಢಪಟ್ಟಿದ್ದು, ಐಸೊಲೇಶನ್ ನಲ್ಲಿ ಇರಿಸಲಾಗಿತ್ತು. ಚಿಕಿತ್ಸೆಯ ವೇಳೆ ಸುಝಾನ್, "ಕೃತಕ ಉಸಿರಾಟ ವ್ಯವಸ್ಥೆಯನ್ನು ಬಳಸಲು ನನಗೆ ಮನಸಿಲ್ಲ. ಇದನ್ನು ಯುವ ರೋಗಿಗಳಿಗೆ ನೀಡಿ. ನಾನು ಒಳ್ಳೆಯ ಬದುಕನ್ನು ಜೀವಿಸಿದ್ದೇನೆ" ಎಂದು ವೈದ್ಯರ ಬಳಿ ಹೇಳಿದ್ದರು ಎನ್ನಲಾಗಿದೆ.

ಇದಾಗಿ 2 ದಿನಗಳಲ್ಲಿ ಅಂದರೆ ಮಾರ್ಚ್ 22ರಂದು ಸುಝಾನ್ ಕೊನೆಯುಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News