ಅಗಾಧ ಪ್ರಮಾಣದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಕುಸಿತ

Update: 2020-04-01 17:11 GMT

ಸಿಂಗಾಪುರ, ಎ. 1: ಪೆಟ್ರೋಲಿಯಂ ಉತ್ಪನ್ನಗಳು ಈ ತಿಂಗಳು ಅಗಾಧ ಪ್ರಮಾಣದಲ್ಲಿ ಬೇಡಿಕೆ ಕಳೆದುಕೊಂಡಿವೆ ಹಾಗೂ ಇದು ಮುಂದಿನ ಹಲವು ವರ್ಷಗಳ ಅವಧಿಗೆ ಪೆಟ್ರೋಲಿಯಂ ಉದ್ಯಮವನ್ನೇ ಬದಲಿಸುವ ಭರವಸೆಯನ್ನು ಹುಟ್ಟುಹಾಕಿದೆ.

ಕಳೆದ ವರ್ಷದ ಎಪ್ರಿಲ್‌ಗೆ ಹೋಲಿಸಿದರೆ, ಈ ವರ್ಷದ ಎಪ್ರಿಲ್‌ನಲ್ಲಿ ತೈಲ ಬೇಡಿಕೆಯು 1.5 ಕೋಟಿ ಬ್ಯಾರಲ್‌ನಷ್ಟು ಕಡಿಮೆಯಾಗಲಿದ್ದು, 2.2 ಕೋಟಿ ಬ್ಯಾರಲ್‌ಗೆ ಇಳಿಯಲಿದೆ ಎಂದು ಉದ್ಯಮ ಪರಿಣತರು ಲೆಕ್ಕಹಾಕಿದ್ದಾರೆ. ಈ ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ತೈಲಶುದ್ಧೀಕರಣ ಘಟಕಗಳು ಈಗಾಗಲೇ ತೈಲ ಸಂಸ್ಕರಣೆಯಲ್ಲಿ ಕಡಿತ ಮಾಡಿವೆ. ತೈಲ ಬಾವಿಗಳು ಉತ್ಪಾದನೆಯಲ್ಲಿ ಕಡಿತ ಮಾಡಿವೆ. ಅದೇ ವೇಳೆ, ಜಗತ್ತಿನಾದ್ಯಂತದ ತೈಲ ಸಂಗ್ರಹಾಗಾರಗಳು ಹಿಗ್ಗಿವೆ.

‘‘ಇದು ಉದ್ಯಮದ ಸ್ಥಿತಿಗತಿಯನ್ನೇ ಬದಲಿಸಬಹುದಾಗಿದೆ’’ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ಗ್ರೂಪ್ ಇಂಕ್‌ನ ವಿಶ್ಲೇಷಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News