ಎಚ್-1ಬಿ ವೀಸಾ ಸ್ಥಗಿತಗೊಳಿಸಿ: ಅಮೆರಿಕ ತಂತ್ರಜ್ಞಾನ ಉದ್ಯೋಗಿಗಳಿಂದ ಟ್ರಂಪ್‌ಗೆ ಒತ್ತಾಯ

Update: 2020-04-01 17:15 GMT

 ವಾಶಿಂಗ್ಟನ್, ಎ. 1: ಈ ವರ್ಷದ ಮಟ್ಟಿಗೆ ಎಚ್-1ಬಿ ವೀಸಾ ಕಾರ್ಯಕ್ರಮವನ್ನು ಅಮಾನತಿನಲ್ಲಿಡುವಂತೆ ಅಮೆರಿಕದ ತಂತ್ರಜ್ಞಾನ ಉದ್ಯೋಗಿಗಳನ್ನು ಪ್ರತಿನಿಧಿಸುವ ‘ಯುಎಸ್ ಟೆಕ್ಸ್ ವರ್ಕರ್ಸ್’ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿದೆ.

 ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಅಮೆರಿಕದಲ್ಲಿ ಭಾರೀ ಪ್ರಮಾಣದಲ್ಲಿ ಆಗಿರುವ ಉದ್ಯೋಗ ನಷ್ಟದ ಹಿನ್ನೆಲೆಯಲ್ಲಿ, ಅಮೆರಿಕದ ತಂತ್ರಜ್ಞಾನ ಉದ್ಯೋಗಿಗಳ ಹಿತಾಸಕ್ತಿಯನ್ನು ರಕ್ಷಿಸುವುದಕ್ಕಾಗಿ ಅದು ಈ ಮನವಿ ಮಾಡಿದೆ.

ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಎಚ್-1ಬಿ ವೀಸಾದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ವೀಸಾಗಳ ಮೂಲಕ ಅಮೆರಿಕದ ತಂತ್ರಜ್ಞಾನ ಕಂಪೆನಿಗಳು ಪ್ರತಿ ವರ್ಷ ಭಾರತ ಮತ್ತು ಚೀನಾಗಳಿಂದ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ.

ಎಚ್-1ಬಿ ವೀಸಾ ಕಾರ್ಯಕ್ರಮದಿಂದಾಗಿ ‘ಹಾನಿಗೊಳಗಾಗಿರುವ’ ಅಮೆರಿಕದ ಉದ್ಯೋಗಿಗಳ ಧ್ವನಿಗಳನ್ನು ಪ್ರತಿನಿಧಿಸುವುದಾಗಿ ‘ಯುಎಸ್ ಟೆಕ್ಸ್ ವರ್ಕರ್ಸ್’ ಹೇಳಿಕೊಡಿದೆ.

ವಿದೇಶಿ ಅತಿಥಿ ಉದ್ಯೋಗಿಗಳಿಗೆ ನೀಡಲಾಗುವ ಎಚ್-2ಬಿ ವೀಸಾ ಕಾರ್ಯಕ್ರಮವನ್ನೂ ಸ್ಥಗಿತಗೊಳಿಸುವಂತೆ ಅದು ಪತ್ರವೊಂದರಲ್ಲಿ ಟ್ರಂಪ್‌ರನ್ನು ಒತ್ತಾಯಿಸಿದೆ.

ಸಾಮಾನ್ಯವಾಗಿ ವಿದೇಶಿ ಕೃಷಿ ಕೆಲಸಗಾರರಿಗೆ ಎಚ್-2ಬಿ ವೀಸಾಗಳನ್ನು ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News