ಫುಕುಶಿಮಾ ತಲುಪಿದ ಒಲಿಂಪಿಕ್ಸ್ ಜ್ಯೋತಿ

Update: 2020-04-01 18:12 GMT

ಫುಕುಶಿಮಾ, ಎ.1: ಟೋಕಿಯೊ 2020 ಒಲಿಂಪಿಕ್ಸ್ ಸಂಘಟಕರು ಬುಧವಾರ ಒಲಿಂಪಿಕ್ ಜ್ವಾಲೆಯನ್ನು ಫುಕುಶಿಮಾ ಸರಕಾರಕ್ಕೆ ಹಸ್ತಾಂತರಿಸಿದರು. ಕೊರೋನ ವೈರಸ್ ನಿಂದಾಗಿ ಏಕಾಏಕಿ ಕ್ರೀಡಾಕೂಟವನ್ನು ಒಂದು ವರ್ಷ ಮುಂದೂಡಲಾಗಿದ್ದು, ಪುಕುಶಿಮಾದಲ್ಲಿ ಒಂದು ತಿಂಗಳುಗಳ ಕಾಲ ಪ್ರದರ್ಶಿಸಲಾಗುವುದು.

ಫುಕುಶಿಮಾದ ಜೆ-ವಿಲೇಜ್ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಹಸ್ತಾಂತರ ಪ್ರಕ್ರಿಯೆ ನಡೆಯಿತು, ಇದನ್ನು ಮೂಲತಃ ಟಾರ್ಚ್ ರಿಲೇಯ ಪ್ರಾರಂಭದ ಹಂತವಾಗಿ ನಿಗದಿಪಡಿಸಲಾಗಿದೆ. ಟೋಕಿಯೊ 2020 ಸಿಒಒ ಯುಕಿಹಿಕೊ ನುನೊಮುರಾ ಮಾತ್ರ ಸಂಘಟನಾ ಸಮಿತಿ ಪರ ಉತ್ತರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಕೊರೋನ ವೈರಸ್‌ನ್ನು ಜಯಿಸಿದ ನಂತರ ಟೋಕಿಯೊ 2020ರ ಒಲಿಂಪಿಕ್ಸ್ ನಡೆಯಲಿದೆ ಎಂದು ನುನೊಮುರಾ ಹೇಳಿದರು. ನಂತರ ನುನೊಮುರಾ ಒಲಿಂಪಿಕ್ಸ್ ಜ್ಯೋತಿಯನ್ನು ಫುಕುಶಿಮಾ ಮಕೋಟೊ ನೊಜಿಗೆ ಹಸ್ತಾಂತರಿಸಿದರು.

ಮುಂದಿನ ವರ್ಷ ಜೆ-ವಿಲೇಜ್‌ನಿಂದ ಒಲಿಂಪಿಕ್ಸ್ ಜ್ಯೋತಿಯ ನಿರ್ಗಮನವು ಯಾವುದೇ ತೊಂದರೆಗಳಿಲ್ಲದೆ ಸಾಗಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ. ಇದು ಭರವಸೆಯ ಸಂಕೇತ - ನಾವು ಈಗ ಎದುರಿಸುತ್ತಿರುವ ಈ ಕೊರೋನ ವೈರಸ್ ರೋಗದಿಂದ ಜಪಾನ್ ಮಾತ್ರವಲ್ಲ ಇಡೀ ಜಗತ್ತು ಜಯಿಸಲಿದೆ ಎಂದು ನೊಜಿ ಹೇಳಿದರು.

ಟೋಕಿಯೊಗೆ ಸ್ಥಳಾಂತರಗೊಳ್ಳುವ ಮೊದಲು ಎಪ್ರಿಲ್ 30 ರ ವರೆಗೆ ಜ್ಯೋತಿಯು ಜೆ-ವಿಲೇಜ್‌ನಲ್ಲಿ ಪ್ರದರ್ಶನದಲ್ಲಿರುತ್ತದೆ. ಜಪಾನಿನ ರಾಜಧಾನಿಯಲ್ಲಿ ಅದನ್ನು ಎಲ್ಲಿ ಪ್ರದರ್ಶಿಸಲಾಗುವುದು ಎಂದು ಸಂಘಟಕರು ಇನ್ನೂ ನಿರ್ಧರಿಸಿಲ್ಲ.

ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕ್ರೀಡಾಕೂಟವನ್ನು ಮುಂದೂಡಲು ಒಪ್ಪುವ ಮೂಲಕ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮತ್ತು ಜಪಾನ್ ಸರಕಾರ ಕಳೆದ ವಾರ ವಿಶ್ವದ ಕ್ರೀಡಾಪಟುಗಳು ಮತ್ತು ಕ್ರೀಡಾ ಸಂಸ್ಥೆಗಳ ತೀವ್ರ ಒತ್ತಡಕ್ಕೆ ಮಣಿದಿತ್ತು. ಟೋಕಿಯೊ ಒಲಿಂಪಿಕ್ಸ್ ಈಗ ಜುಲೈ 23 ರಿಂದ ಆಗಸ್ಟ್ 8, 2021 ರವರೆಗೆ ನಿಗದಿಯಾಗಿದೆ.

121 ದಿನಗಳ ಕಾಲ ಒಲಿಂಪಿಕ್ಸ್ ಟಾರ್ಚ್ ರಿಲೇ ಜೆ-ವಿಲೇಜ್‌ನಿಂದ ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಜಪಾನ್‌ನಲ್ಲಿ 2011ರ ಭೂಕಂಪ ಮತ್ತು ಸುನಾಮಿಯ ನಂತರ ಜೆ-ವಿಲೇಜ್ ಪುನರ್‌ನಿರ್ಮಾಣದ ಸಂಕೇತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News