ದಿಲ್ಲಿ ಗುರುದ್ವಾರದಲ್ಲಿ ಸಿಕ್ಕಿಕೊಂಡಿದ್ದ 205ಕ್ಕೂ ಹೆಚ್ಚು ಮಂದಿ: ತಡವಾಗಿ ಬೆಳಕಿಗೆ ಬಂದ ಘಟನೆ

Update: 2020-04-02 09:47 GMT

ಹೊಸದಿಲ್ಲಿ:  ರಾಜಧಾನಿಯ ಮಜ್ನು ಕಾ ತಿಲ್ಲಾ ಪ್ರದೇಶದಲ್ಲಿನ ಗುರುದ್ವಾರವೊಂದರಲ್ಲಿ ಲಾಕ್‍ ಡೌನ್‍ ನಿಂದಾಗಿ ಸಿಕ್ಕಿ ಹಾಕಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಸುಮಾರು 205 ಮಂದಿಯನ್ನು  ದಿಲ್ಲಿ ಹಾಗೂ ಪಂಜಾಬ್‍ನ ಅಧಿಕಾರಿಗಳು ಅಲ್ಲಿಂದ ತೆರವುಗೊಳಿಸಿದ್ದಾರೆ.

ಈ ಎಲ್ಲಾ ಜನರನ್ನೂ ನೆಹರೂ ವಿಹಾರ್ ಶಾಲೆಯಲ್ಲಿ ಕ್ವಾರಂಟೀನ್‍ ನಲ್ಲಿರಿಸಲಾಗುವುದು. ಗುರುದ್ವಾರದಲ್ಲಿದ್ದ 250 ಮಂದಿಯ ಪೈಕಿ ಕೆಲ ಪಾಕಿಸ್ತಾನೀಯರೂ ಇದ್ದರೆನ್ನಲಾಗಿದೆ.

ನಿಝಾಮುದ್ದೀನ್ ಮರ್ಕಝ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ  ಸಾವಿರಾರು ಮಂದಿಯಲ್ಲಿ ಹಲವರಿಗೆ ಕೊರೋನ ಸೋಂಕು ತಗಲಿದ  ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ.

ಗುರುದ್ವಾರದಲ್ಲಿ ಸಿಲುಕಿದ್ದವರನ್ನು ಆದಷ್ಟು ಬೇಗ ರಕ್ಷಿಸಲು ಕ್ರಮ ಕೈಗೊಳ್ಳದೇ ಇರುವುದಕ್ಕೆ ದಿಲ್ಲಿ ಸಿಖ್ ಗುರುದ್ವಾರ ಆಡಳಿತ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಅವರು ಪಂಜಾಬ್ ಸೀಎಂ ಅಮರಿಂದರ್ ಸಿಂಗ್ ಅವರನ್ನು ದೂರಿದ್ದಾರೆ. ಗುರುದ್ವಾರದಲ್ಲಿದ್ದ ಮೂರು ಕುಟುಂಬಗಳನ್ನು ಹೊರತುಪಡಿಸಿ ಎಲ್ಲರೂ ಭಾರತೀಯರು ಹಾಗೂ ಹೆಚ್ಚಿನವರು ಪಂಜಾಬ್‍ನವರು, ಉಳಿದವರು ಪಾಕಿಸ್ತಾನದಿಂದ ಬಂದವರು, ಎಂದು ಅವರು ಹೇಳಿದ್ದಾರೆ.

ಇವರೆಲ್ಲಾ ಲಾಕ್‍ ಡೌನ್‍ ನಿಂದಾಗಿ ಅಲ್ಲಿಯೇ ಉಳಿಯುವಂತಾಯಿತೇ ಹೊರತು ಅಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News