ನಾಯಿ, ಬೆಕ್ಕುಗಳ ಸೇವನೆ ನಿಷೇಧಿಸಿದ ಚೀನಾದ ನಗರ

Update: 2020-04-02 16:21 GMT

ಶೆಂಝನ್ (ಚೀನಾ), ಎ. 2: ಕಾಡುಪ್ರಾಣಿಗಳ ವ್ಯಾಪಾರವನ್ನು ತಡೆಗಟ್ಟುವ ಭಾಗವಾಗಿ, ನಾಯಿ ಮತ್ತು ಬೆಕ್ಕುಗಳನ್ನು ತಿನ್ನುವುದನ್ನು ಚೀನಾದ ಶೆಂಝನ್ ನಗರ ನಿಷೇಧಿಸಿದೆ. ನೂತನ-ಕೊರೋನವೈರಸ್ ಸಾಂಕ್ರಾಮಿಕ ದೇಶದಲ್ಲಿ ನಡೆಸಿದ ಮಾರಣಹೋಮದ ಬಳಿಕ ಅದು ಈ ಕ್ರಮವನ್ನು ತೆಗೆದುಕೊಂಡಿದೆ.

 ನೂತನ-ಕೊರೋನವೈರಸ್ ಪ್ರಾಣಿಗಳಿಂದ ಮಾನವರಿಗೆ ವರ್ಗಾವಣೆಯಾಗಿದೆ ಎಂಬುದಾಗಿ ವಿಜ್ಞಾನಿಗಳು ಶಂಕಿಸಿದ್ದಾರೆ. ಚೀನಾದ ಇನ್ನೊಂದು ನಗರ ವುಹಾನ್‌ನಲ್ಲಿನ ಕಾಡುಪ್ರಾಣಿ ಮಾರುಕಟ್ಟೆಯ ಸಂಪರ್ಕಕ್ಕೆ ಬಂದ ಜನರಲ್ಲಿ ಮೊದಲ ಕೊರೋನವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆ ಮಾರುಕಟ್ಟೆಯಲ್ಲಿ ಬಾವಲಿಗಳು, ಹಾವುಗಳು, ಪುನುಗು ಬೆಕ್ಕುಗಳು ಮತ್ತು ಇತರ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತಿತ್ತು.

ನಾಯಿಗಳು ಮತ್ತು ಬೆಕ್ಕುಗಳನ್ನು ತಿನ್ನುವುದರ ಮೇಲಿನ ನಿಷೇಧವು ಮೇ 1ರಿಂದ ಜಾರಿಗೆ ಬರುವುದು ಎಂದು ದಕ್ಷಿಣ ಚೀನಾದ ತಂತ್ರಜ್ಞಾನ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News