ದೇರಳಕಟ್ಟೆ: ವೈನ್ ಶಾಪ್ ನಿಂದ ಅಪಾರ ಮೌಲ್ಯದ ಮದ್ಯ ದೋಚಿದ ಕಳ್ಳರು

Update: 2020-04-03 04:31 GMT

ಕೊಣಾಜೆ, ಎ.3: ದೇರಳಕಟ್ಟೆ ಸಮೀಪದ ಕುಕ್ಕುದಕಟ್ಟೆ ವೈನ್ ಶಾಪ್ ವೊಂದಕ್ಕೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಅಪಾರ ಮೌಲ್ಯದ ಮದ್ಯವನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಕುಕ್ಕುದಕಟ್ಟೆಯ ಎಂಎಸ್ ಐಎಲ್ ವೈನ್ ಶಾಪ್ ಗೆ ಕಳ್ಳರು‌ ನುಗ್ಗಿ ಕಳವು ನಡೆಸಿದ್ದಾರೆ. ಅಲ್ಲದೆ ಚಾಲಾಕಿ ಕಳ್ಳರು ಅಲ್ಲಿದ್ದ‌ ಸಿಸಿ ಕ್ಯಾಮರಾದ ಡಿವಿಆರ್ ನ್ನು ಕೂಡಾ ಕಳವುಗೈದಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ನಡೆಸುತ್ತಿದ್ದಾರೆ.

ಕಳೆದ ಹಲವಾರು ದಿನಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಇದರಿಂದ ಹಲವೆಡೆ ಮದ್ಯಪ್ರಿಯರು ಆತ್ಮಹತ್ಯೆ ಗೈಯುತ್ತಿರುವ ಪ್ರಕರಣಗಳು‌ ನಡೆಯುತ್ತಿದ್ದರೆ ಹಲವೆಡೆ ಮದ್ಯದಂಗಡಿಗಳನ್ನು‌ ಲೂಟಿ ಮಾಡುತ್ತಿರುವ ಪ್ತಕರಣಗಳು ಕೂಡಾ ನಡೆಯುತ್ತಿವೆ.

ಕಳ್ಳರು ಬೆಲೆ ಬಾಳುವ ಮೌಲ್ಯದ ಮದ್ಯವನ್ನು ಅಲ್ಲೇ ಬಿಟ್ಟು ಕಡಿಮೆ ಮೌಲ್ಯದ ಮದ್ಯವನ್ನು ಕೊಂಡೊಯ್ದಿದ್ದಾರೆ ಎಂದು‌ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News