ಕೊಣಾಜೆ: ಮಗುಚಿ ಬಿದ್ದ ಕಾರು‌, ಚಾಲಕನಿಗೆ ಗಾಯ

Update: 2020-04-04 09:00 GMT

ಕೊಣಾಜೆ, ಎ.4: ಕೊಣಾಜೆ ಗ್ರಾಮದ ನಡುಪದವು ಕ್ರಾಸ್ ನ ಪಿ.ಎ.ಕಾಲೇಜು ದ್ವಾರದ ಬಳಿ ಕಾರೊಂದು ಮಗುಚಿ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಚಾಲಕ ಪಾರಾಗಿರುವ ಘಟನೆ ಶನಿವಾರ ನಡೆದಿದೆ.

ಮುಡಿಪು ಸಮೀಪದ ವ್ಯಕ್ತಿಯೊಬ್ಬರು ತಮ್ಮ ಶಿಪ್ಟ್ ಕಾರಿನಲ್ಲಿ ತೊಕ್ಕೊಟ್ಟು ಕಡೆಗೆ ಹೋಗುತ್ತಿದ್ದಾಗ ಕೊಣಾಜೆ ಪಿ.ಎ.ಕಾಲೇಜು ದ್ವಾರದ ಬಳಿ ಎದುರಿನಿಂದ‌ ಬೈಕ್ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಬ್ರೇಕ್ ಹಾಕಿದ್ದು, ಪರಿಣಾಮ ರಸ್ತೆ ಬದಿಯ ತಡೆಗೋಡೆಗೆ ಬಡಿದು ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಈ ಬಗ್ಗೆ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News