ಉಪ್ಪಿನಂಗಡಿ: ಸಂಕಷ್ಟದಲ್ಲಿದ್ದ ಬಡ ಕುಟುಂಬಗಳಿಗೆ ದಿನಸಿ ವಿತರಿಸಿದ ಪೊಲೀಸ್ ಸಿಬ್ಬಂದಿ

Update: 2020-04-04 09:48 GMT

ಉಪ್ಪಿನಂಗಡಿ, ಎ.4: ಲಾಕ್‍ಡೌನ್‍ನಿಂದಾಗಿ ಆಹಾರ ಸಾಮಗ್ರಿಗಳಿಲ್ಲದೆ ಸಂಕಷ್ಟದಲ್ಲಿದ್ದ ತನ್ನ ಬೀಟ್ ವ್ಯಾಪ್ತಿಯ ಬಡ ಐದು ಕುಟುಂಬಗಳಿಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿಯೋರ್ವರು ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಸಂಗಯ್ಯ ಕಾಳೆಯವರು ಬಜತ್ತೂರು ಗ್ರಾಮದ ಬೀಟ್ ಪೊಲೀಸ್ ಆಗಿದ್ದು, ತನ್ನ ಗ್ರಾಮದ ಐದು ಬಡ ಕುಟುಂಬಗಳು ಲಾಕ್‍ಡೌನ್‍ನ ಅವಧಿಯಲ್ಲಿ ಸಂಕಷ್ಟದಿಂದಿರುವುದನ್ನು ಅರಿತು ಅವರಿಗೆ ಕೆಲ ದಿನಗಳಿಗೆ ಬೇಕಾಗುವಷ್ಟು ಅಕ್ಕಿ, ಮೆಣಸು ಸೇರಿದಂತೆ ಇತರೆ ದಿನಸಿ ಸಾಮಗ್ರಿಗಳು ಹಾಗೂ ತರಕಾರಿಗಳನ್ನು ತನ್ನ ವತಿಯಿಂದ ನೀಡಿ ಅವರ ಕಷ್ಟಕ್ಕೆ ಸ್ಪಂದಿಸಿದರು. ತನ್ನ ಕರ್ತವ್ಯದ ಒತ್ತಡದ ನಡುವೆಯೂ ಪೊಲೀಸ್ ಸಿಬ್ಬಂದಿಯೋರ್ವರ ಈ ಮಾನವೀಯ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ಈ ಸಂದರ್ಭ ಬಜತ್ತೂರು ಗ್ರಾ.ಪಂ. ಸದಸ್ಯ ಮಾಧವ ಪೂಜಾರಿ ಒರುಂಬೋಡಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News