3 ತಿಂಗಳ ಬಿಲ್ ಪಾವತಿ ಮುಂದೂಡಿಕೆ ಬಗ್ಗೆ ನಿರ್ದೇಶನ ಬಂದಿಲ್ಲ : ಮೆಸ್ಕಾಂನಿಂದ ಸ್ಪಷ್ಟನೆ

Update: 2020-04-04 14:12 GMT

ಮಂಗಳೂರು, ಎ. 4: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿದ್ದು, ವಿದ್ಯುತ್ ಗ್ರಾಹಕರು ಮೂರು ತಿಂಗಳ ಅವಧಿಗೆ (2020ರ ಜೂನ್‌ವರೆಗೆ ) ವಿದ್ಯುತ್ ಬಿಲ್ ಪಾವತಿಸುವುದನ್ನು ಮುಂದೂಡಿಕೆ ಮಾಡಲಾಗಿದೆ ಎಂಬ ವರದಿ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಿಗಾಗಲೀ ಯಾವುದೇ ನಿರ್ದೇಶನಗಳು ಬಂದಿಲ್ಲ ಎಂದು ಮೆಸ್ಕಾಂ ತಿಳಿಸಿದೆ.

ಇದೇ ವೇಳೆ ಗ್ರಾಹಕರಿಗೆ ಪ್ರಕಟನೆ ಮೂಲಕ ಮನವಿ ಮಾಡಿರುವ ಮೆಸ್ಕಾಂ, ಮಾಸಿಕ ಮಾಪಕ ಓದುವಿಕೆ ಹಾಗೂ ಬಿಲ್ ವಿತರಣೆಯನ್ನು ಯಾವ ರೀತಿಯಲ್ಲಿ ನಿರ್ವಹಿಸಬಹುದು ಎಂಬುದನ್ನೂ ಹೇಳಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಹಕರು ಮನೆಯಿಂದಲೇ ತಮ್ಮ ಕಚೇರಿ ಕೆಲಸಗಳನ್ನು ತೊಂದರೆ ಇಲ್ಲದೆ ನಿರ್ವಹಿಸಲು, ಅಡಚಣೆ ರಹಿತ ವಿದ್ಯುತ್ ನೀಡಲು 24X7 ಮೆಸ್ಕಾಂ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ಕೈಗೊಂಡಿದೆ. ಈ ಸಮಯದಲ್ಲಿ ತಾವು ಮನೆಯಲ್ಲಿ ಸುರಕ್ಷಿತವಾಗಿರಲು ಹಾಗು ಆರೋಗ್ಯವಾಗಿರಲು ಮೆಸ್ಕಾಂ ಬಯಸುತ್ತದೆ ಎಂದು ಮನವಿಯಲ್ಲಿ ಮೆಸ್ಕಾಂ ತಿಳಿಸಿದೆ.

* ಎಲ್ಲಾ ವಿದ್ಯುತ್ ಗ್ರಾಹಕರಿಗೆ ಸರಾಸರಿ ಬಿಲ್ ಅಥವಾ ಹಿಂದಿನ ತಿಂಗಳ ಬಿಲ್ ಅನ್ನು ನೀಡುವ ವ್ಯವಸ್ಥೆ ಮಾಡಲಾಗುವುದು.
* ಹಾಲಿ ತಂತ್ರಾಂಶದಲ್ಲಿರುವ ಗ್ರಾಹಕರುಗಳಿಗೆ ವಿದ್ಯುತ್ ಬಿಲ್ ಅನ್ನು ಇ-ಮೇಲ್ / ಎಸ್.ಎಂಎಸ್. / ವಾಟ್ಸಾಪ್ ಮುಖಾಂತರ ಕಳುಹಿಸಲಾಗುವುದು.
* ಗ್ರಾಹಕರು ಸಹಾಯವಾಣಿ 1912 ಕ್ಕೆ ಕರೆಮಾಡಿ ಅಕೌಂಟ್ ಐ.ಡಿ. ಹಾಗು ಮೊಬೈಲ್ ಸಂಖ್ಯೆಯನ್ನು ನೀಡಿದಲ್ಲಿ ಬಿಲ್ ವಿವರಗಳನ್ನು ಇ-ಮೇಲ್ / ಎಸ್.ಎಂಎಸ್. / ವಾಟ್ಸಾಪ್ ಮುಖಾಂತರ ಕಳುಹಿಸಲಾಗುವುದು.
* ಗ್ರಾಹಕರು ಮೆಸ್ಕಾಂನ ಜಾಲತಾಣ www.mesco.in ನೊಂದಾಯಿಸಿಕೊಂಡು ವಿದ್ಯುತ್ ಬಿಲ್ ವಿವರಗಳನ್ನು ಪಡೆಯಬಹುದು.
* ಗ್ರಾಹಕರು ಸಂಬಂಧಪಟ್ಟ ಉಪವಿಭಾಗ ಕಚೇರಿಯನ್ನು ಸಂಪರ್ಕಿಸಿ ವಿದ್ಯುತ್ ಬಿಲ್ ವಿವರವನ್ನು ಪಡೆಯಬಹುದು. (ಉಪವಿಭಾಗದ ಸಂಪರ್ಕ ವಿವರಗಳು ಜಾಲತಾಣದಲ್ಲಿ ಲಭ್ಯವಿವೆ)
ಮೆಸ್ಕಾಂ, ಗ್ರಾಹಕರಿಂದ ದಿನನಿತ್ಯ ವಸೂಲಾಗುವ ಕಂದಾಯ ಮೊತ್ತದಲ್ಲಿ ದಿನನಿತ್ಯದ ಖರ್ಚು ವೆಚ್ಚಗಳು ಅದರಲ್ಲಿ ಪ್ರಮುಖವಾಗಿ ವಿದ್ಯುತ್ ಉತ್ಪಾದಕರ ಖರೀದಿ ವೆಚ್ಚವನ್ನು ಭರಿಸುತ್ತಿವೆ. ಗ್ರಾಹಕರಿಂದ ವಿದ್ಯುತ್ ಬಿಲ್ ಪಾವತಿಯು ವಿಳಂಬ ಉಂಟಾದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಉತ್ಪಾದಕರ ಬಿಲ್ಲನ್ನು ಪಾವತಿಸಲು ಅಸಾಧ್ಯವಾಗುವುದರ ಜೊತೆಗೆ, ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸಲು ಹಾಗು ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡಲು ಕಷ್ಟಕರವಾಗುವುದು. ಆದ್ದರಿಂದ ಗ್ರಾಹಕರು ಈ ಕೆಳಕಂಡ ಆನ್‌ಲೈನ್/ ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿಸಲು ವಿನಂತಿಸಲಾಗಿದೆ.
ನಗರ ಪ್ರದೇಶದ ಗ್ರಾಹಕರು (ಆರ್.ಎ.ಪಿ.ಡಿ.ಆರ್.ಪಿ. ಪಟ್ಟಣ ಪ್ರದೇಶಗಳು - ಮಂಗಳೂರು, ಪುತ್ತೂರು, ಬಂಟ್ವಾಳ, ಉಡುಪಿ/ಮಣಿಪಾಲ, ಶಿವಮೊಗ್ಗ, ಸಾಗರ, ಶಿಕಾರಿಪುರ, ಭದ್ರಾವತಿ, ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರು)

 ಗ್ರಾಹಕರು www.mescom.org.in ಜಾಲತಾಣದಲ್ಲಿ ಲಾಗ್‌ಇನ್ ಆಗಿ ಬಿಲ್‌ನ್ನು ವೀಕ್ಷಿಸಿ ಮತ್ತು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಇಂಟರ್‌ನೆಟ್ ಬ್ಯಾಂಕಿಂಗ್ ಹಾಗು ಯು.ಪಿ.ಐ. ಸೌಲಭ್ಯಗಳೊಂದಿಗೆ ವಿದ್ಯುತ್ ಬಿಲ್ಲನ್ನು ಪಾವತಿಸಬಹುದು. (‘Quick payment‘ ಆಯ್ಕೆಯನ್ನು ಮಾಡಿ ಗ್ರಾಹಕರು ರಿಜಿಸ್ಟರ್ ಮಾಡಿಕೊಳ್ಳದೆಯೂ ಪಾವತಿಸಬಹುದು.)
* ಗ್ರಾಹಕರು ಪೇ-ಟಿಎಮ್ ಅಪ್ಲಿಕೇಷನ್‌ನಲ್ಲಿ ಲಾಗಿನ್ ಆಗಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ವಿದ್ಯುತ್ ಬಿಲ್‌ನ್ನು ಪಾವತಿಸಬಹುದಾಗಿದೆ.
* ಗ್ರಾಹಕರು, ಬಿ.ಬಿ.ಪಿ.ಎಸ್. ಪ್ಲಾಟ್‌ಫಾರ್ಮ್ ಮೂಲಕ ಯಾವುದೇ ಬ್ಯಾಂಕ್ ಆಪ್, ಬಿ.ಬಿ.ಪಿ.ಎಸ್. ಔಟ್‌ಲೆಟ್‌ ಬಳಸಿಕೊಂಡು ವಿದ್ಯುತ್ ಬಿಲ್‌ನ್ನು ಪಾವತಿಸಬಹುದಾಗಿದೆ.
* ಗ್ರಾಹಕರು, ಕರ್ನಾಟಕ ಮೊಬೈಲ್ ಒನ್ ಆಪ್ ಅಪ್ಲಿಕೇಷನ್‌ನಲ್ಲಿ ಲಾಗಿನ್ ಆಗಿ ಬಿಲ್‌ನ್ನು ವೀಕ್ಷಿಸಿ ಮತುತಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಇಂಟರ್‌ನೆಟ್ ಬ್ಯಾಂಕಿಂಗ್ ಹಾಗು ಯು.ಪಿ.ಐ. ಸೌಲಭ್ಯಗಳೊಂದಿಗೆ ವಿದ್ಯುತ್ ಬಿಲ್‌ನ್ನು ಪಾವತಿಸಬಹುದಾಗಿರುತ್ತದೆ.
* ಗ್ರಾಹಕರು http://www.karnatakaone.gov.in ಜಾಲತಾಣದಲ್ಲಿ ವಿದ್ಯುತ್ ಬಿಲ್‌ನ್ನು ಪಾವತಿಸಬಹುದಾಗಿದೆ. ಗ್ರಾಮೀಣ ಪ್ರದೇಶದ ಗ್ರಾಹಕರು (ಮೇಲೆ ತಿಳಿಸಿದ ಆರ್.ಎ.ಪಿ.ಡಿ.ಆರ್.ಪಿ. ವ್ಯಾಪ್ತಿಯ ಗ್ರಾಹಕರನ್ನು ಹೊರತುಪಡಿಸಿ)
* ಗ್ರಾಹಕರುwww.mescomtrm.com ಜಾಲತಾಣದಲ್ಲಿ ಲಾಗ್‌ಇನ್ ಆಗಿ ಬಿಲ್‌ನ್ನು ವೀಕ್ಷಿಸಿ, ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಇಂಟರ್‌ನೆಟ್ ಬ್ಯಾಂಕಿಂಗ್ ಹಾಗು ಯು.ಪಿ.ಐ. ಸೌಲಭ್ಯಗಳೊಂದಿಗೆ ವಿದ್ಯುತ್ ಬಿಲ್‌ನ್ನು ಪಾವತಿಸಬಹುದಾಗಿರುತ್ತದೆ.
* ಗ್ರಾಹಕರು ಪೇ-ಟಿಎಮ್ ಅಪ್ಲಿಕೇಷನ್‌ನಲ್ಲಿ ಲಾಗಿನ್ ಆಗಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ವಿದ್ಯುತ್ ಬಿಲ್‌ನ್ನು ಪಾವತಿಸಬಹುದಾಗಿದೆ.
ಅದಲ್ಲದೆ ಉಪವಿಭಾಗದ ನಗದು ಕೌಂಟರ್‌ಗಳು ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಯಾವುದೇ ಗ್ರಾಹಕರು ಬಿಲ್ ಪಾವತಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದಲ್ಲಿ ಅಂತಹ ಗ್ರಾಹಕರು ಸ್ಥಳೀಯ ಮೆಸ್ಕಾಂ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸುವುದು, ಅಂತಹ ಅರ್ಜಿಗಳನ್ನು ಉಪ ವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲು ಸೂಚಿಸಿದೆ.

ಈ ವಿಧಾನವನ್ನು ಕೋವಿಡ್-19 ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರ ಸುರಕ್ಷತೆಗಾಗಿ ಪ್ರಸಕ್ತ ತಿಂಗಳಿಗೆ ಮಾತ್ರ ಅನ್ವಯಿಸು ವುದು. ಮೇ 1ರಿಂದ ಯಥಾಪ್ರಕಾರ ಮಾಪಕ ಓದುವಿಕೆ, ಬಿಲ್ ಹಂಚುವಿಕೆ ಹಾಗು ಬಿಲ್ ಸ್ವೀಕೃತಿ ಚಟುವಟಿಕೆಗಳನ್ನು ನಿರ್ವಹಿಸಲಾಗುವುದು ಮತ್ತು ವಾಸ್ತವಿಕ ಬಳಕೆಯಲ್ಲಿ ಹಾಗು ಸರಾಸರಿ ಬಳಕೆಯಲ್ಲಿ ತಪ್ಪು/ ವ್ಯತ್ಯಾಸ ಕಂಡುಬಂದಲ್ಲಿ ಮುಂದಿನ ಬಿಲ್‌ನಲ್ಲಿ ಸರಿಪಡಿಸಲಾಗುವುದು ಎಂದು ಮೆಸ್ಕಾಂ ತನ್ನ ಪ್ರಕಟನೆಯಲ್ಲಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News