ಕಠಿಣ ವಾರ ನಮ್ಮ ಮುಂದಿದೆ: ಅಮೆರಿಕನ್ನರಿಗೆ ಟ್ರಂಪ್ ಎಚ್ಚರಿಕೆ

Update: 2020-04-05 05:02 GMT

 ವಾಷಿಂಗ್ಟನ್,ಎ.5: ಮುಂಬರುವ ದಿನಗಳಲ್ಲಿ ಅತ್ಯಂತ ಭಯಾನಕ ಸಂಖ್ಯೆಯ ಸಾವುಗಳಿಗೆ ದೇಶ ಸಾಕ್ಷಿಯಾಗಬಹುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದರು.

ಕೊರೋನ ವೈರಸ್‌ನಿಂದಾಗಿ ವಿಶ್ವದಾದ್ಯಂತ ಸಾವಿನ ಸಂಖ್ಯೆ 60,000 ಗಡಿ ದಾಟಿದ್ದು, ಅಮೆರಿಕವೊಂದರಲ್ಲಿ 8,300 ಜನರು ಸಾವನ್ನಪ್ಪಿದ್ದಾರೆ. ಇದೀಗ ಇಟಲಿ ಹಾಗೂ ಸ್ಪೇನ್‌ನಲ್ಲಿ ಸಾವಿನ ಸಂಖ್ಯೆಯಲ್ಲಿ ಇಳಿಮುಖ ಕಾಣಿಸುತ್ತಿದೆ.

 ವೈಟ್‌ಹೌಸ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್, "ಅತ್ಯಂತ ಭಯಾನಕ ಪರಿಸ್ಥಿತಿಗೆ ಅಮೆರಿಕ ಪ್ರವೇಶಿಸುತ್ತಿದೆ. ಸಾವಿನ ಸಂಖ್ಯೆ ಅತ್ಯಂತ ಹೆಚ್ಚಾಗುವ ಸಾಧ್ಯತೆಯಿದೆ. ಇದು ನಿಜವಾಗಿಯೂ ಅತ್ಯಂತ ಕಠಿಣ ವಾರವಾಗಲಿದೆ. ಆದರೆ, ಅಮೆರಿಕ ಶಾಶ್ವತವಾಗಿ ಸ್ಥಗಿತಗೊಳ್ಳಲು ಸಾಧ್ಯವಿಲ್ಲ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಸಾವಿನ ಸಂಖ್ಯೆ ತಗ್ಗಿಸುವ ಕೆಲಸ ಮಾಡಲಾಗುತ್ತಿದೆ. ನಾವು ನಮ್ಮ ದೇಶವನ್ನು ನಾಶಪಡಿಸಲಾರೆವು. ಚಿಕಿತ್ಸೆ ಸಮಸ್ಯೆಗಿಂತ ಕೆಟ್ಟದಾಗಿರಬಾರದು ಎಂದು ನಾನು ಆರಂಭದಿಂದಲೂ ಹೇಳುತ್ತಿದ್ದೇನೆ. ಒಂದು ನಿರ್ದಿಷ್ಟ ಹಂತದಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ'' ಎಂದು ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News