24 ಗಂಟೆಗಳಲ್ಲಿ ಭಾರತದಲ್ಲಿ 472 ಕೊರೋನ ವೈರಸ್ ಪ್ರಕರಣಗಳು ದಾಖಲು

Update: 2020-04-05 17:14 GMT

ಹೊಸದಿಲ್ಲಿ, ಎ.5: ಶನಿವಾರದಿಂದೀಚಿಗೆ ಭಾರತದಲ್ಲಿ ಹೊಸದಾಗಿ 472 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,374ಕ್ಕೇರಿದೆ. ಈ ವರೆಗೆ ದೇಶದಲ್ಲಿ 79 ಜನರು ಈ ಪಿಡುಗಿಗೆ ಬಲಿಯಾಗಿದ್ದು,267 ರೋಗಿಗಳು ಚೇತರಿಸಿಕೊಂಡಿದ್ದಾರೆ.

ದೇಶಾದ್ಯಂತ ಈವರೆಗೆ ಒಟ್ಟು 274 ಜಿಲ್ಲೆಗಳಲ್ಲಿ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿವೆ. ಶುಕ್ರವಾರ ಗರಿಷ್ಠ ಸಂಖ್ಯೆ (601)ಯಲ್ಲಿ ಹೊಸ ಪ್ರಕರಣಗಳು ವರದಿಯಾಗಿದ್ದವು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು ರವಿವಾರ ಇಲ್ಲಿ ತಿಳಿಸಿದರು.

ಆದರೆ ರಾಜ್ಯಗಳಿಂದ ನೇರವಾಗಿ ವರದಿಯಾದ ಅಂಕಿಸಂಖ್ಯೆಗಳನ್ನು ಸುದ್ದಿಸಂಸ್ಥೆ ಪಿಟಿಐ ವಿಶ್ಲೇಷಿಸಿದ್ದು,ಅದರ ವರದಿಯಂತೆ ಕನಿಷ್ಠ 106 ಸಾವುಗಳು ಸಂಭವಿಸಿವೆ ಮತ್ತು ದೃಢೀಕೃತ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 3,624ಕ್ಕೇರಿದೆ. ಈ ಪೈಕಿ 284 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

ವಿವಿಧ ರಾಜ್ಯಗಳು ಪ್ರಕಟಿಸಿರುವ ಅಂಕಿಸಂಖ್ಯೆಗಳಿಗೆ ಹೋಲಿಸಿದರೆ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು ಕಡಿಮೆ ಪ್ರಮಾಣವನ್ನು ತೋರಿಸುತ್ತಿವೆ. ಕಾರ್ಯವಿಧಾನ ವಿಳಂಬಗಳು ಈ ವ್ಯತ್ಯಾಸಕ್ಕೆ ಕಾರಣವಾಗಿವೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News